ರಾಮಕೃಷ್ಣ ಮಿಷನ್‌ನಿಂದ ಸ್ವಚ್ಛ ಮಂಗಳೂರು ಅಭಿಯಾನ
Update: 2018-04-01 18:02 IST
ಮಂಗಳೂರು, ಎ.1: ನಗರದ ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ 22ನೆ ಶ್ರಮದಾನವು ರವಿವಾರ ಕುಲಶೇಖರದಲ್ಲಿ ಜರಗಿತು.
ಉಪನ್ಯಾಸಕ ಡಾ. ರಾಕೇಶ್ ಕೃಷ್ಣ ಹಾಗೂ ಜಪಾನಿ ಪ್ರಜೆ ಮಸಾರೊ ಮೊನೊಯಿ ಶ್ರಮದಾನಕ್ಕೆ ಹಸಿರು ನಿಶಾನೆ ತೋರಿದರು. ಅಭಿಯಾನದ ಮಾರ್ಗದರ್ಶಿ ವಿಧಾನ ಪರಿಷತ್ ವಿಪಕ್ಷ ಮುಖ್ಯಸಚೇತಕ ಕ್ಯಾ.ಗಣೇಶ ಕಾರ್ಣಿಕ್, ಪ್ರೊ. ಸತೀಶ ಭಟ್, ನಝೀರ್ ಅಹ್ಮದ್, ಜೊಸೆಫ್ ರೊಡ್ರಿಗಸ್, ಹಿಮ್ಮತ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಕಾರ್ಯಕರ್ತರು ಕುಲಶೇಖರ-ಶಕ್ತಿನಗರ ಜಂಕ್ಷನ್‌ನಲ್ಲಿ ಸ್ವಚ್ಛತೆಯನ್ನು ಆರಂಭಿಸಿದರು. ಬಸ್ ತಂಗುದಾಣಗಳ ಸ್ವಚ್ಛತೆ, ತ್ಯಾಜ್ಯರಾಶಿ ತೆರವು, ಸ್ವಚ್ಛತಾ ಜಾಗೃತಿ ನಡೆಸಲಾಯಿತು.