×
Ad

ದ.ಕ., ಉ.ಕ. ಜಿಲ್ಲಾ ಅಲ್ಪಸಂಖ್ಯಾತ ಕಾಂಗ್ರೆಸ್ ವೀಕ್ಷಕರಾಗಿ ನೂರುದ್ದೀನ್ ಸಾಲ್ಮರ

Update: 2018-04-01 19:57 IST

ಮಂಗಳೂರು, ಎ.1: ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲಾ ಅಲ್ಪಸಂಖ್ಯಾತ ವಿಭಾಗದ ವೀಕ್ಷಕರಾಗಿ ನೂರುದ್ದೀನ್ ಸಾಲ್ಮರ ಅವರನ್ನು ನಿಯೋಜಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ಕಮಿಟಿ ಆದೇಶ ಹೊರಡಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿಯ ಅವಧಿಯಲ್ಲಿ ಅಲ್ಪಸಂಖ್ಯಾತರಿಗೆ ದೊರಕಿದ ಸೌಲಭ್ಯ ಮತ್ತು ಪ್ರಯೋಜನಗಳ ಕುರಿತು ಜನರಿಗೆ ಮಾಹಿತಿ ತಲುಪಿಸುವುದು ಅವರ ಮುಖ್ಯ ಗುರಿ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗವನ್ನು ಸಂಘಟಿಸುವುದು, ವೀಕ್ಷಕರಾಗಿ ಮಾರ್ಗದರ್ಶನ ಮಾಡುವ ಜವಾಬ್ದಾರಿಯನ್ನು ಪಕ್ಷವು ನೂರುದ್ದೀನ್ ಸಾಲ್ಮರ ಅವರಿಗೆ ವಹಿಸಿ ಕೊಟ್ಟಿರುವುದಾಗಿ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News