ಪಿಎಫ್ಐ ಅಂಗರಗುಂಡಿ ವತಿಯಿಂದ ಮಸೀದಿ ಸ್ವಚ್ಚತಾ ಕಾರ್ಯಕ್ರಮ
Update: 2018-04-01 20:08 IST
ಅಂಗರಗುಂಡಿ, ಎ. 1: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಂಗರಗುಂಡಿ ವಲಯದ ವತಿಯಿಂದ ಬೈಕಂಪಾಡಿ ಮುಹಮ್ಮದ್ ಸಾಲಿಹ್ ಜುಮಾ ಮಸೀದಿ (ಎ.ಸಿ. ಮಸೀದಿ) ಯಲ್ಲಿ ಸ್ವಚ್ಚತಾ ಕಾರ್ಯಕ್ರಮ ಸಂಘಟನೆಯ ಅಧ್ಯಕ್ಷರಾದ ಅಬೂಬಕರ್ ಸಿದ್ದೀಕ್ ಅಂಗರಗುಂಡಿ ಅವರ ನೇತೃತ್ವದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಹಲವು ಗಣ್ಯರಿಂದ ಉತ್ತಮ ಬೆಂಬಲ ವ್ಯಕ್ತವಾಯಿತು. ಈ ಸಂದರ್ಭ ಅಂಗರಗುಂಡಿಯ ನಿಯಾಝ್ ಎಸ್.ಎಂ., ಹಾಜಿ ಹಮೀದ್ ಎನ್.ಬಿ., ಇಮ್ರಾನ್ ತೇಳಾರ್, ಯಾಸೀರ್ ಹಾಗು ಎಸ್.ಡಿ.ಪಿ.ಐ. ಅಂಗರಗುಂಡಿ ವಲಯದ ಅಧ್ಯಕ್ಷ ಸಿದ್ದೀಕ್ ಅಂಗರಗುಂಡಿ, ಕ್ಯಾಂಪಸ್ ಫ್ರಂಟ್ ಜಿಲ್ಲಾ ಸಮಿತಿ ಸದಸ್ಯ ನಿಝಾಮ್ ಅಂಗರಗುಂಡಿ ಹಾಗು ಫಿ.ಎಫ್.ಐ. ಅಂಗರಗುಂಡಿ ಯುನಿಟ್ ಸದಸ್ಯರು ಹಾಗು ಪರಿಸರದ ಹಲವಾರು ಮಂದಿ ಪಾಲ್ಗೊಂಡಿದ್ದರು.