ಎ.8ರಂದು ಶಿರೂರು ಸ್ವಾಮೀಜಿ ಪ್ರಚಾರಕ್ಕೆ ಚಾಲನೆ
Update: 2018-04-01 20:51 IST
ಉಡುಪಿ, ಎ.1: ಈ ಬಾರಿಯ ಚುನಾವಣೆಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿರುವ ಶಿರೂರು ಮಠಾಧೀಶ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಎ.8ರಂದು ಮಲ್ಪೆಯಿಂದ ಮ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ.
ಮಧ್ವಾಚಾರ್ಯರು ಕೃಷ್ಣನನ್ನು ತಂದಿರುವ ಮಲ್ಪೆಯಿಂದಲೇ ಚುನಾವಣಾ ಪ್ರಚಾರ ಪ್ರಾರಂಭಿಸಲು ನಿರ್ಧರಿಸಲಾಗಿದೆ. ವಡಭಾಂಡೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳಲ್ಲಿ ಮತಯಾಚನೆ ಮಾಡಲಾಗುವುದು. ಬಳಿಕ ಕೃಷ್ಣ ಮಠದಲ್ಲಿ ದೇವರ ದರ್ಶನ ಪಡೆದು ರಥಬೀದಿಯಲ್ಲಿ ಮತಯಾಚನೆ ಮಾಡಲಾಗುವುದು ಎಂದು ಶಿರೂರು ಸ್ವಾಮೀಜಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.