ಸಂವಿಧಾನದ ರಕ್ಷಣೆಗಾಗಿ ಭೀಮಾಯಾನ: ಕರಪತ್ರ ಬಿಡುಗಡೆ
Update: 2018-04-01 20:55 IST
ಉಡುಪಿ, ಎ.1: ಸಂವಿಧಾನದ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ರವರ 127ನೇ ಜನ್ಮದಿನಾಚರಣೆಯ ಪ್ರಯುಕ್ತ ಸಂವಿಧಾನದ ರಕ್ಷಣೆಗಾಗಿ ಅಂಬೇಡ್ಕರ್ ಯುವಸೇನೆ ಉಡುಪಿ ಘಟಕದ ವತಿಯಿಂದ ಭೀಮಾಯಾನ ರ್ಯಾಲಿಯ ಕರಪತ್ರವನ್ನು ರವಿವಾರ ಬಿಡುಗಡೆ ಮಾಡಲಾಯಿತು.
ಗುಜ್ಜರಬೆಟ್ಟು ಗುರುರಾಘವೇಂದ್ರ ಭಜನಾ ಮಂದಿರದ ಸಭಾಂಗಣದಲ್ಲಿ ಹಿರಿಯ ದಲಿತ ಮುಖಂಡ ಮತ್ತು ಧರ್ಮದರ್ಶಿ ಸುಂದರ ಗುಜ್ಜರಬೆಟ್ಟು ಕರಪತ್ರವನ್ನು ಬಿಡುಗಡೆ ಮಾಡಿದರು.
ಈ ಸಂದಭರ್ದಲ್ಲಿ ದಲಿತ ಚಿಂತಕ ಜಯನ್ ಮಲ್ಪೆ, ಮುಖಂಡರಾದ ಸುಧಾಕರ ಮಾಸ್ತರ್ ಗುಜ್ಜರ್‌ಬೆಟ್ಟು, ದಲಿತ ನಾಯಕ ಸುಂದರ್ ಕಪ್ಪೆಟ್ಟು, ಉಡುಪಿ ನಗರಸಭಾ ಸದಸ್ಯ ಗಣೇಶ್ ನೆರ್ಗಿ, ಅಂಬೇಡ್ಕರ್ ಯುವಸೇನೆಯ ಅಧ್ಯಕ್ಷ ಹರೀಶ್ ಸಾಲ್ಯಾನ್ ಮಲ್ಪೆ, ಸುರೇಶ್ ಪಾಲನ್ ತೊಟ್ಟಂ, ಪ್ರಸಾದ್ ಮಲ್ಪೆ, ದೀಪಕ್ ಜಿ., ಶಶಿಕಾಂತ್ ಲಕ್ಷೀನಗರ, ಜೀವನ್, ದಿಲೀಪ್, ಭಗವನ್ ದಾಸ್ ನೆರ್ಗಿ, ಅರುಣ್ ಸಾಲ್ಯಾನ್ ಮಲ್ಪೆ ಮೊದಲಾದವರು ಉಪಸ್ಥಿತರಿದ್ದರು. ಮೋಹನ್ ಗುಜ್ಜರ ಬೆಟ್ಟು ಸ್ವಾಗತಿಸಿದರು. ಸಂಪತ್ ವಂದಿಸಿದರು.