ಮಂಗಳೂರು ಉತ್ತರ ಕ್ಷೇತ್ರ: ಚುನಾವಣಾ ಸಭೆ
ಮಂಗಳೂರು, ಎ. 1: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳ ಸಭೆಯು ರವಿವಾರ ಮಹಾನಗರಪಾಲಿಕೆ ಸಭಾಂಗಣದಲ್ಲಿ ನಡೆಯಿತು.
ಉತ್ತರ ಕ್ಷೇತ್ರ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಮಾತನಾಡಿ, ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಯಾಗುವಂತೆ ಎಲ್ಲರೂ ಗಮನಹರಿಸಬೇಕು. 50,000 ರೂ.ಗಿಂತ ಅಧಿಕ ಮೊತ್ತದ ನಗದುಗಳಿಗೆ ದಾಖಲೆ ಹೊಂದಿರಬೇಕು. 10,000 ರೂ.ಕ್ಕಿಂತ ಅಧಿಕ ಮೊತ್ತದ ಉಡುಗೊರೆ ಅಥವಾ ಮದ್ಯದ ವಸ್ತುಗಳು ಅನುಮಾನಾಸ್ಪದವಾಗಿ ಕಂಡುಬಂದರೆ ಅವುಗಳನ್ನು ವಶಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸೆಕ್ಟರ್ ಮೆಜಿಸ್ಟ್ರೇಟ್‌ಗಳು, ಸಾಂಖ್ಯಿಕ ವಿಚಕ್ಷಣಾ ತಂಡಗಳು ನಿರಂತರವಾಗಿ ಕಾರ್ಯಾಚರಿಸಬೇಕು ಎಂದು ಪ್ರಶಾಂತ್ ಕುಮಾರ್ ತಿಳಿಸಿದರು. ಸಹಾಯಕ ಪೊಲೀಸ್ ಆಯುಕ್ತ ಮಂಜುನಾಥ ಶೆಟ್ಟಿ ಅವರು ಚುನಾವಣಾ ನೀತಿ ಸಂಹಿತೆ ಬಗ್ಗೆ ಮಾಹಿತಿ ನೀಡಿದರು.
ಪ್ರೊಬೇಷನರಿ ಕೆಎಎಸ್ ಅಧಿಕಾರಿ ಸಂತೋಷ್ ಕುಮಾರ್, ಕಂದಾಯ ಅಧಿಕಾರಿಗಳಾದ ನವೀನ್ ಕುಮಾರ್, ಆಸಿಫ್ ಮತ್ತಿತರರು ಉಪಸ್ಥಿತರಿದ್ದರು.