×
Ad

ಕುಂಬ್ರ ಮರ್ಕಝ್: 128 ಆಲಿಮಾಗಳಿಗೆ ‌ಪದವಿ‌ ಪ್ರದಾನ

Update: 2018-04-01 21:10 IST

ಕುಂಬ್ರ, ಎ. 1: ಹೆಣ್ಮಕ್ಕಳ ಮತ-ಲೌಕಿಕ ವಿದ್ಯಾಭ್ಯಾಸ ಕ್ಷೇತ್ರದಲ್ಲಿ ಕಳೆದ ಹದಿನೈದು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಪುತ್ತೂರು ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ಮೂರು ವರ್ಷಗಳ ಶರಿಯಾ ಪದವಿ ಶಿಕ್ಷಣ ಮುಗಿಸಿದ ನೂರಾ ಇಪ್ಪತ್ತಂಟು ಆಲಿಮಾಗಳಿಗೆ ‌"ಅಲ್ ಮಾಹಿರಾ" ಎಂಬ ಪದವಿ ನೀಡುವ ಕಾರ್ಯಕ್ರಮವು ಕುಂಬ್ರ ಮರ್ಕಝ್ ವಠಾರದಲ್ಲಿ ವಿಜೃಂಭಣೆಯಿಂದ ನಡೆಯಿತು.

ನಾಡಿನ ವಿವಿಧ ಕಡೆಗಳಿಂದ ಆಗಮಿಸಿದ ಸಾವಿರಾರು ಮಹಿಳೆಯರ ಸಮಾವೇಶದಲ್ಲಿ ಸಯ್ಯಿದಾ ರಂಲಾ ಬೀವಿ  ಸನದ್ ದಾನ ನಿರ್ವಹಿಸಿದರು. ಸೈಯದ್ ಕುಟುಂಬದ ಹಾಗೂ ಇನ್ನಿತರ ಪ್ರಮುಖ ಮಹಿಳೆಯರು ಮುಖ್ಯ ಅತಿಥಗಳಾಗಿ ಭಾಗವಹಿಸಿದರು.

ಇದರ ಅಂಗವಾಗಿ ನಡೆದ ಅಧ್ಯಯನ ಶಿಬಿರದಲ್ಲಿ ಉಳ್ಳಾಲ ಸಯ್ಯಿದ್ ಮದನಿ ಬನಾತ್ ಡಿಗ್ರೀ ಕಾಲೇಜ್ ಪ್ರಿನ್ಸಿಪಾಲ್  ಝಾಹಿದಾ ಜಲೀಲ್ ವಿಷಯ ಮಂಡಿಸಿದರು.‌ ಪುತ್ತೂರು ಶಾಸಕಿ  ಶಕುಂತಲಾ ಶೆಟ್ಟಿ ಶುಭ ಹಾರೈಸಿದರು. ಶಾಲಿಸಾ ಅಲ್ ಮಾಹಿರಾ ಚೆನ್ನಾರ್, ರಾಹಿಲಾ ಜಮಾಲ್ ಪಯೋಟ, ಸಂದೇಶ ಭಾಷಣ ಮಾಡಿದರು, ಮರ್ಕಝುಲ್ ಹುದಾ ಅಲುಂನಿ‌ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಶಾಹಿಸ್ತಾ ಬಾನು ಕಬಕ ಸ್ವಾಗತಿಸಿ, ಉಪನ್ಯಾಸಕಿ ಝುಬೈದಾ ಧನ್ಯವಾದ ಸಲ್ಲಿಸಿದರು.

ಇದರ ಅನುಬಂಧವಾಗಿ  ಸಂಜೆ ಸಂಸ್ಥೆಯ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ಮದನಿ ಅಲ್ ಹಾದಿ ಅವರ ಅಧ್ಯಕ್ಷತೆಯಲ್ಲಿ  ನಡೆದ ಸಾರ್ವಜನಿಕ ಸಮಾರಂಭದಲ್ಲಿ ಅಖಿಲ ಭಾರತ ಸುನ್ನೀ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಕಾಂತಪುರಂ ಎ. ಪಿ. ಅಬೂಬಕರ್ ಮುಸ್ಲಿಯಾರ್ ಮುಖ್ಯ ಭಾಷಣ ಮಾಡಿದರು.

ಕರ್ನಾಟಕ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಪ್ರಾರ್ಥನೆ ನಿರ್ವಹಿಸಿದರು. ಅಲ್ ಮದೀನಾ ವಿದ್ಯಾ ಸಂಸ್ಥೆ ಯ ಅಧ್ಯಕ್ಷ ಶರಫುಲ್ ಉಲಮಾ ಮಂಜನಾಡಿ ಉಸ್ತಾದ್ ಉದ್ಘಾಟಿಸಿದರು.

ಯೆನೆಪೊಯ ಯುನಿವರ್ಸಿಟಿ ಕುಲಾಧಿಪತಿ ವೈ..ಅಬ್ದುಲ್ಲಾ ಕುಂಞಿ, ಮೌಲಾನಾ ಅಬೂ ಸುಫ್ಯಾನ್ ಮದನಿ, ‌ಎಸ್ ಎಂ. ರಶೀದ್ ಹಾಜಿ ,ಶರಿಯಾ ಕಾಲೇಜು ಪ್ರಿನ್ಸಿಪಾಲ್ ವಳವೂರು ಮುಹಮ್ಮದ್ ಸಅದಿ‌ , ಶಾಫಿ ಸಅದಿ ಬೆಂಗಳೂರು, ಜಿ.ಎಂ.ಕಾಮಿಲ್ ಸಖಾಫಿ, ಕೆ.ಎಂ.ಅಬೂಬಕರ್ ಸಿದ್ದೀಕ್ , ಎಂ.ಎಸ್ ಮುಹಮ್ಮದ್,ಡಿ ಪಿ ಸಖಾಫಿ ಬೈತಾರ್ ಮುಂತಾದ ವರು ಸಂದೇಶ ಭಾಷಣ ಮಾಡಿದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಮ್ಮೆಸ್ಸೆಂ ಝೈನೀ ಕಾಮಿಲ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಸಂಚಾಲಕ ಶಾಕಿರ್ ಹಾಜಿ ಮಿತ್ತೂರು ಸ್ವಾಗತಿಸಿ ‌ಮೇನೇಜರ್ ಬಲ್ಕಾಡ್ ಅಲಿ ಸಅದಿ ಧನ್ಯವಾದ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News