×
Ad

ಗಂಗೊಳ್ಳಿ: ಮನೆಗೆ ನುಗ್ಗಿ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

Update: 2018-04-01 21:15 IST

ಗಂಗೊಳ್ಳಿ, ಎ.1: ಹೊಸಾಡು ಗ್ರಾಮದ ಕೇರಿಕೋಡ್ಲು ಎಂಬಲ್ಲಿ ಮಾ.31 ರಂದು ಬೆಳಗ್ಗೆ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಮಹಾಬಲ ಶೆಟ್ಟಿ ಎಂಬವರ ಮನೆಯ ಒಳಗೆ ನುಗ್ಗಿದ ಕಳ್ಳರು ಗೋಡ್ರೇಜ್ ಕಾಪಾಟಿನಲ್ಲಿದ್ದ 8 ಚಿನ್ನದ ಬಳೆ, 2 ಚಿನ್ನದ ಸರ, 2 ಚಿನ್ನದ ಉಂಗುರ, ಒಂದು ಜೊತೆ ಚಿನ್ನದ ಬೆಂಡೋಲೆ ಒಟ್ಟು 177 ಗ್ರಾಂ ತೂಕದ ಒಟ್ಟು 4,07,500 ಮೌಲ್ಯದ ಚಿನ್ನದ ಒಡವೆಗಳನ್ನು ಕಳವು ಮಾಡಿದ್ದಾರೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News