ಕಾಪು: ಅಕ್ರಮ ಮರಳುಗಾರಿಕೆಗೆ ದಾಳಿ
Update: 2018-04-01 21:17 IST
ಕಾಪು, ಎ.1: ಮಣಿಪುರ ಗ್ರಾಮದ ದೆಂದೂರಕಟ್ಟೆಯ ಪಾಪನಶಿನಿ ಹೊಳೆ ಯಲ್ಲಿ ಮಾ.31ರಂದು ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಮರಳನ್ನು ವಶಪಡಿಸಿಕೊಂಡಿದೆ.
ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಮಹೇಶ್ ನೇತೃತ್ವದ ತಂಡ ಸುಮಾರು 15 ಮೆಟ್ರಿಕ್ ಟನ್ ಮರಳನ್ನು ವಶಪಡಿಸಿಕೊಂಡಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಾಗಿದೆ.