ಅಕ್ರಮ ಮದ್ಯ ಮಾರಾಟ: ಬಾರ್‌ಗೆ ದಾಳಿ
Update: 2018-04-01 21:17 IST
ಉಡುಪಿ, ಎ.1: ಪರವಾನಿಗೆ ಷರತ್ತು ಉಲ್ಲಂಘಿಸಿ ಬೆಳಗಿನ ಜಾವ ಮದ್ಯ ಮಾರಾಟ ಮಾಡುತ್ತಿದ್ದ ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿಯ ರಾಯಲ್ ಬಾರ್‌ಗೆ ಎ.1ರಂದು ದಾಳಿ ನಡೆಸಿದ ಉಡುಪಿ ಡಿಸಿಐಬಿ ಪೊಲೀಸರು ಮದ್ಯ ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಾದ ಸದಾನಂದ ಹಾಗೂ ಉದಯ ಶೆಟ್ಟಿ ಎಂಬವರು ಕರ್ನಾಟಕ ಅಬಕಾರಿ ಕಾಯ್ದೆಯ ಪರವಾನಿಗೆ ಷರತ್ತನ್ನು ಉಲ್ಲಂಘಿಸಿ, ಬೆಳಗ್ಗೆ 10ಗಂಟೆ ಬದಲು ಬೆಳಗ್ಗೆ 6:30 ಗಂಟೆಗೆ ಬಾರನ್ನು ತೆರೆದು ಗಿರಾಕಿಗಳಿಗೆ ಮಧ್ಯಪಾನವನ್ನು ಕುಡಿಯಲು ನೀಡಿ ಅಪರಾಧ ಎಸಗಿರುವುದಾಗಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.