​ಮಂಗಳೂರು: ತಾಯಿಯ 100ನೆ ಹುಟ್ಟು ಹಬ್ಬದಂದೇ ಮಗಳು ಮೃತ್ಯು

Update: 2018-04-02 15:22 GMT

ಮಂಗಳೂರು, ಎ. 2: ಶತಾಯುಷಿ ತಾಯಿಯ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದ ಸಂದರ್ಭದಲ್ಲಿ 75 ವರ್ಷದ ಮಗಳು ಮೃತಪಟ್ಟಿರುವ ಘಟನೆ ಸೋಮವಾರ ಪಾಂಡೇಶ್ವರದಲ್ಲಿ ನಡೆದಿದೆ.

ಗ್ಲೋರಿಯಾ ಲೋಬೊ (75) ಮೃತ ಮಹಿಳೆ.

ಅವರು ತನ್ನ ತಾಯಿ ಗ್ಲಾಡಿಸ್ ಡಿಸೋಜಾ ಅವರ 100ನೆ ವರ್ಷದ ಹುಟ್ಟ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಗ್ಲೋರಿಯಾ ಅವರ ಮಗಳು, ಸಹೋದರ ಮತ್ತು ಸಂಬಂಧಿಕರು ಹಾಜರಿದ್ದರು.

ತಾಯಿಯ ಹುಟ್ಟು ಹಬ್ಬಕ್ಕಾಗಿ ತಯಾರಿಸಲಾಗಿದ್ದ ಕೇಕ್‌ನ್ನು ಕತ್ತರಿಸಿ ತಾಯಿಯ ಪರವಾಗಿ ನುಡಿಗಳನ್ನು ಆಡುತ್ತಿದ್ದಾಗ ಗ್ಲೋರಿಯಾ ಕುಸಿದುಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಗ್ಲೋರಿಯಾ ಅವರು ತಾಯಿಯ ಹುಟ್ಟು ಹಬ್ಬ ಆಚರಿಸಲೆಂದೇ ಕೆನಡಾದಿಂದ ಕೆಲವು ದಿನಗಳ ಹಿಂದಷ್ಟೇ ಊರಿಗೆ ಮರಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News