×
Ad

ಬಂಟ್ವಾಳ: ಎ. 8ರಿಂದ ಉಮ್ಮುಲ್ ಕುರಾ ಸಮ್ಮರ್ ಕ್ಯಾಂಪ್

Update: 2018-04-02 21:15 IST

ಬಂಟ್ವಾಳ, ಎ. 2: ತಫ್ಹೀಮುಲ್ ಕುರ್‌ಆನ್ ಉಮ್ಮುಲ್ ಕುರಾ ಬೋಳಂಗಡಿ ಮದ್ರಸದಲ್ಲಿ ಎ. 8ರಿಂದ ಎ. 22 ರವರೆಗೆ "ಇಸ್ಲಾಮೀ ಬೇಸಿಗೆ ಶಿಬಿರ" ನಡೆಯಲಿದೆ.

ಬೆಳಗ್ಗೆ 9:45ರಿಂದ ಮಧ್ಯಾಹ್ನ 12:45ರವರೆಗೆ ಇರುವ ಈ ಶಿಬಿರದಲ್ಲಿ ಕುರ್‌ಆನ್, ಹದೀಸ್, ಮತ್ತು ಇಸ್ಲಾಮೀ ಇತಿಹಾಸ, ಶಿಷ್ಟಾಚಾರಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ತರಬೇತಿ ನಡೆಯಲಿದೆ.

ಪಿಕ್‌ನಿಕ್ ಮತ್ತು ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಶಿಬಿರಾರ್ಥಿಗಳಿಗೆ ಸಾವಿರ ರೂ. ನಿಗದಿ ಪಡಿಸಲಾಗಿದ್ದು, ವಾಹನದ ವ್ಯವಸ್ಥೆಯನ್ನು ಮಾಡಲಾಗಿದೆ. ಉಮ್ಮುಲ್ ಕುರಾ ಸಮ್ಮರ್ ಕ್ಯಾಂಪ್‌ನಲ್ಲಿ ಭಾಗವಹಿಸುವವರು 8722433760, 8277010108, 9449104162, 9071405854 ಅನ್ನು ಸಂಪಪರ್ಕಿಸಬಹುದಾಗಿದೆ ಎಂದು ಚಾರಿಟೇಬಲ್ ಟ್ರಸ್ಟ್‌ನ ಪಿ.ಬಿ. ಹುಸೈನಬ್ಬ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News