×
Ad

ಜಂಇಯತ್ಯತುಲ್ ಫಲಾಹ್ ಸೇವೆ ಶ್ಲಾಘನಾರ್ಹ: ಮುಹಮ್ಮದ್ ಅಸ್ಲಮ್ ಕಾಝಿ

Update: 2018-04-02 22:18 IST

ಕಾಪು, ಎ. 2: ಜಂಇಯ್ಯತುಲ್ ಫಲಾಹ್ ಸಂಸ್ಥೆಯು ಶೈಕ್ಷಣಿಕ ಮತ್ತು ಆರೋಗ್ಯದ ಬಗ್ಗೆ ಹೆಚ್ಚು ಒತ್ತು ನೀಡುತಿದ್ದು, ಇದರ ಸೇವೆಯು ಎಲ್ಲಾ ಧರ್ಮದ ದೇಶ ಜನರಿಗೆ ಒದಗಿಸಿತ್ತಿರುವುದು ಎಬಿಎಫ್ ಗ್ರೂಫ್ ಆಫ್ ಕಂಪೆನಿಯ ಆಡಳಿತ ನಿರ್ದೇಶಕ ಮುಹಮ್ಮದ್ ಅಸ್ಲಮ್ ಕಾಝಿ ಶ್ಲಾಘಿಸಿದರು.

ಅವರು ಶನಿವಾರ ಕಾಪು ಸಿಟಿ ಸೆಂಟರ್‌ನಜ ಕಟ್ಟಡದಲ್ಲಿ ಮಾಲಿಕತ್ವದಲ್ಲಿ ಪಡೆದ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು. ಜಂಇಯ್ಯತುಲ್ ಫಲಾಹ್ ಎಂಬ ಸಂಸ್ಥೆಯು 35ವರ್ಷಗಳ ಹಿಂದೆ ಅರಬ್ ದೇಶದಲ್ಲಿ ದುಡಿಯುತ್ತಿರುವ ದ.ಕ ಮತ್ತು ಉಡುಪಿ ಜಿಲ್ಲೆಯ ಕೆಲವು ಸಮಾಜ ಸೇವಾ ಚಿಂತಕರು ಸೇರಿ ಹುಟ್ಟುಹಾಕಿದ ಸಂಸ್ಥೆಯು ಇಂದು ದ.ಕ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಕಾರ್ಯಾಚರಿಸುತ್ತಿದೆ ಎಂದರು.

ಅಧ್ಯಕ್ಷತೆಯನ್ನು ಕಾಪು ತಾಲ್ಲೂಕಿನ ಜಂಇಯ್ಯತುಲ್ ಫಲಾಹ್ ಘಟಕದ ಅಧ್ಯಕ್ಷ ಶಭಿ ಅಹಮದ್ ಖಾಝಿ ವಹಿಸಿದ್ದರು. ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ಸಂಸ್ಥೆಯ ಸ್ಥಾಪಕ ಸದಸ್ಯರಾದ ಅಬ್ದುಲ್ ಖಾದರ್, ಸಲಾಹುದ್ದೀನ್ ಸಾಹೇಬ್, ಎಸ್.ಆರ್.ಸಿ.ಸಿ ಸದಸ್ಯರಾದ ಮುಹಮ್ಮದ್ ರಫೀಕ್ ಅತ್ತಾವರ, ಅಬ್ದುಲ್ ಜಲೀಲ್ ಉದ್ಯಾವರ. ಶಬ್ಬೀರ್ ಹುಸೇನ್ ಪಡುಬಿದ್ರಿ, ಉದ್ಯಮಿ ಸುಧಾಕರ ಶೆಟ್ಟಿ, ನಝೀರ್ ಅಹಮದ್, ಉಡುಪಿ ಘಟಕದ ಕಾರ್ಯದರ್ಶಿ ಕಾಸಿಮ್ ಬಾರ್ಕೂರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮುಹಮ್ಮದ್ ಅಸ್ಲಮ್ ಕಾಝಿ, ಎಂ.ಎ.ಗಫೂರ್, ಶಬ್ಬೀರ್ ಹುಸೇನ್ ಪಡುಬಿದ್ರಿ, ಅಬ್ದುಲ್ ಜಲೀಲ್ ಉದ್ಯಾವರ ಇವರನ್ನು ಸನ್ಮಾನಿಸಲಾಯಿತು.

ಮೌಲಾನಾ ಮುಹಮ್ಮದ್ ಪರ್ವೀರ್ ಆಲಮ್ ನದ್ವಿ ಕುರ್‌ಆನ್ ಪಠಿಸಿದರು. ಜಂಇಯ್ಯತುಲ್ ಫಲಾಹ್ ಕಾಪು ಘಟಕದ ಉಪಾಧ್ಯಕ್ಷ ಮುಹಮ್ಮದ್ ಸಾಧಿಕ್ ಸ್ವಾಗತಿಸಿದರು. ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ವಂದಿಸಿದರು. ಅನ್ವರ್ ಆಲಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News