×
Ad

ದಿ.ದುರ್ಗಪ್ಪ ಗುಡಿಗಾರ ಮೆಮೋರಿಯಲ್ ಯಕ್ಷಗಾನ ಆರ್ಟ್ಸ್ ಅಕಾಡೆಮಿ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ

Update: 2018-04-02 22:28 IST

ಭಟ್ಕಳ, ಎ. 2: ಯಕ್ಷಗಾನ ಕಲಾವಿದ ದಿ.ದುರ್ಗಪ್ಪ ಗುಡಿಗಾರ ಸ್ಮರಣಾರ್ಥವಾಗಿ ತಾಲೂಕಿನ ನಾಗಯಕ್ಷೆ ಧರ್ಮಾರ್ಥ ಸಭಾಭವನದಲ್ಲಿ ಯಕ್ಷಗಾನ ಆರ್ಟ್ಸ್ ಅಕಾಡೆಮಿ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆಗೊಂಡಿತು.

ಈ ಸಂದರ್ಭದಲ್ಲಿ ಮಾತನಾಡಿದ  ಭಾಗವತ ಸುಬ್ರಹ್ಮಣ್ಯ ಧಾರೇಶ್ವರ, ಕಲೆಯಲ್ಲಿ ಮೇಲು ಕೀಳು ಇಲ್ಲದೆ ಯಾವುದೇ ಪಾತ್ರಕ್ಕೆ ಹೊಂದಿಕೊಳ್ಳಲು ಕಲಾವಿ ದರು ಮುಜುಗರ ಪಟ್ಟುಕೊಳ್ಳಬಾರದು ಎನ್ನುವದನ್ನು ಕಲಾವಿದರಿಗೆ ಮಾದರಿಯಾಗುವಂತೆ ಪ್ರೇರೇಪಿಸಿದವರಲ್ಲಿ ದಿವಂಗತ ದುರ್ಗಪ್ಪ ಗುಡಿಗಾರ ಓರ್ವ ರಾಗಿದ್ದು ಅವರು ಯಕ್ಷಗಾನದಲ್ಲಿ ಮಹತ್ತರ ಬೆಳವಣಿಗೆಗೆ ಸಾಕ್ಷಿಯಾಗಿದ್ದರು ಎಂದರು.

ಗುಡಿಗಾರರು ಇಕೊ, ಮೈಕ್, ವಿದ್ಯುತ್ ಹಾರ್ಮೋನೀಯಂಗಳ ಬಳಕೆಯನ್ನು ಅಳವಡಿಸಿ ತೋರಿಸಿದ್ದರು. ಭಾಗವತಿಕೆಯಲ್ಲಷ್ಟೇ ತನ್ನ ಪರಿಣಿತಿಯನ್ನು ತೋರದೇ ನಾಟ್ಯ, ಸಂಗೀತ, ಸ್ತ್ರೀವೇಷಧಾರಿಯಾಗಿಯೂ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿಕ್ಕ ಸನ್ನಿವೇಶಕ್ಕೂ ಭಾಗವತಿಕೆ ಮಾಡಲು ಸಂತೋಷದಿಂದ ಒಪ್ಪಿಕೊಳ್ಳುತ್ತಿದ್ದರು. ಯಕ್ಷಗಾನ ರಂಗದಲ್ಲಿ ಅಪಾರ ಅನುಭವವಿದ್ದರೂ ಕಿರಿಯ ಕಲಾವಿದರನ್ನು ಅವರು ನಡೆಸಿಕೊಳ್ಳುವ ಪರಿ ಅನುಕರಣೀಯ ಎಂದರು.

ಉಡುಪಿಯ ಯಕ್ಷಕಲಾ ರಂಗದ ಅಧ್ಯಕ್ಷ ಮುರಳಿ ಕಾರ್ಡೇಕರ ಮಾತನಾಡಿ, ಭಟ್ಕಳದಲ್ಲಿ ಯಕ್ಷಗಾನ ಕಲೆಯ ಉಳಿಸಿ ಬೆಳೆಸಲು ಇಂತಹ ಟ್ರಸ್ಟನ ಅವಶ್ಯಕತೆ ಇದೆ ಎಂದರು. ದಿ. ದುರ್ಗಪ್ಪ ಗುಡಿಗಾರ ಧರ್ಮಪತ್ನಿ ಶಾರದ ಗುಡಿಗಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮೋಹನ ಪೆರ್ಡೂರ, ಶಂಭೂ ಹೆಗಡೆ, ವೀರೇಂದ್ರ ಶ್ಯಾನಭಾಗ್, ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ, ಫ್ರೆಂಡ್ಸ್ ಮೆಲೋಡಿಸ್‌ನ ಸುನೀಲ್ ಶೇಟ್, ಚಂದ್ರಕಾಂತ ಕಿಣಿ, ಉಮಾ ಕಿಣಿ, ಜೆಸಿಐ ಜಬ್ಬರ, ಐಆರ್ ಭಟ್ ಮೊದಲಾದವರು ಉಪಸ್ಥಿತರಿದ್ದರು.

ನಂತರ ಫ್ರೆಂಡ್ಸ್ ಮೆಲೋಡಿಸ್ ಭಟ್ಕಳ ಇವರ ವತಿಯಿಂದ ಸುಗಮ ಸಂಗೀತ, ಗಣಪತಿ ದೇವಾಡಿಗರಿಂದ ಸ್ಯಾಕ್ಷೋಪೋನ್ ಹಾಗೂ ಸುಬ್ರಹ್ಮಣ್ಯ ಧಾರೇಶ್ವರ ಇವರ ನೇತೃತ್ವದಲ್ಲಿ ಯಕ್ಷಗಾನ ತಾಳಮದ್ದಲೆ ಶರಸೇತು ಬಂಧ ಪ್ರಸಂಗ ನಡೆಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News