ಎ.6ರಿಂದ ಕಟಪಾಡಿ ದರ್ಗಾ ಉರೂಸ್
Update: 2018-04-02 22:31 IST
ಉಡುಪಿ, ಎ.2: ಕಟಪಾಡಿ ಮಸೀದಿ ಸಮೀಪ ಅಂತ್ಯ ವಿಶ್ರಮಗೊಂಡಿರುವ ಅಶೈಕ್ ಫಖೀರ್ ಶಾಹ್ ವಲಿಯುಲ್ಲಾಹೀ(ಖ.ಸಿ) ರವರ ಉರೂಸ್ ಯಾನೆ ಝಿಯಾರತ್ ಎ.6ರಿಂದ ಎ.8ರವರೆಗೆ ನಡೆಯಲಿದೆ.
ಎ.6ರಂದು ಜುಮಾ ನಮಾಝಿನ ಬಳಿಕ ಮಸೀದಿ ಅಧ್ಯಕ್ಷ ಕೆ.ಶಹಬಾನ್ ಧ್ವಜಾರೋಹಣ ನೆರವೇರಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿರುವರು. ಇಶಾ ನಮಾಝಿನ ಬಳಿಕ ಕಾರವಾರದ ಖಾಝಿ ಮೌಲಾನಾ ಮುಫ್ತಿ ಇಶ್ತಿಯಾಕುಲ್ ಖಾದಿರಿ ಉರ್ದು ಭಾಷಣ ಮಾಡಲಿರುವರು. ನಂತರ ಅಜಿಲಮೊಗೇರು ಸಯ್ಯಿದುಲ್ ಬಶರ್ ಬುರ್ದಾ ತಂಡದಿಂದ ಬುರ್ದಾ ಆಲಾಪಣೆ ನಡೆಯಲಿದೆ.
ಎ.7ರಂದು ಮಗ್ರಿಬ್ ನಮಾಝಿನ ಬಳಿಕ ಬೃಹತ್ ಸಂದಲ್ ಮೆರವಣಿಗೆ ನಡೆಯಲಿದೆ. ರಾತ್ರಿ 9ಗಂಟೆಗೆ ಸಮಾರೋಪ ಸಮಾರಂಭದಲ್ಲಿ ತಾಜುಶ್ಶರೀಅಃ ಎಮ್ ಅಲಿಕುಂಞ ಉಸ್ತಾದ್ ಆಶೀರ್ವಚನ ನೀಡಲಿರುವರು.
ಕಾವು ಪುತ್ತೂರು ಅಸ್ಸಯ್ಯದ್ ಫಕ್ರುದ್ದೀನ್ ಅಲ್ ಹದ್ದಾದ್ ತಂಙಳ್ ಮುಖ್ಯ ಭಾಷಣ ಮಾಡಲಿರುವರು. ಎ.8ರಂದು ಬೆಳಿಗ್ಗೆ 9:30ಕ್ಕೆ ಮೌಲಿದ್ ಮಜ್ಲಿಸ್ ನಡೆಯಲಿದೆ ಎಂದು ಕಟಪಾಡಿ ಜುಮ್ಮಾ ಮಸೀದಿ ಪ್ರಕಟಣೆ ತಿಳಿಸಿದೆ.