×
Ad

ತಲಪಾಡಿ: ಮಹ್ಲರತುಲ್ ಬದ್ರಿಯ್ಯಾ ಉದ್ಘಾಟನೆ

Update: 2018-04-03 16:57 IST

ಮಂಗಳೂರು, ಎ.3: ಎಸ್ಸೆಸ್ಸೆಫ್ ತಲಪಾಡಿ ಸೆಕ್ಟರ್ ಆಶ್ರಯದಲ್ಲಿ ಆರಂಭಿಸಲಾದ ಮಹ್ಲರತುಲ್ ಬದ್ರಿಯ್ಯಾ ಇದರ ಉದ್ಘಾಟನಾ ಸಮಾರಂಭವು ತಲಪಾಡಿ ಹೊಸನಗರದ ತಾಜುಲ್ ಉಲಮಾ ಎಜುಕೇಶನ್ ಸೆಂಟರ್‌ನಲ್ಲಿ ಇತ್ತೀಚೆಗೆ ನಡೆಯಿತು.

ಅಸ್ಸಯದ್ ಶಹೀರ್ ತಂಙಳ್ ದುಆಗೈದರು. ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಉಪಾಧ್ಯಕ್ಷ ಹಾಗೂ ಡಿವಿಷನ್ ಮಹ್ಲರತುಲ್ ಬದ್ರಿಯ್ಯಾದ ಖಲೀಫ ಇಬ್ರಾಹೀಂ ಅಹ್ಸನಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

 ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ತಲಪಾಡಿ ಸೆಕ್ಟರ್ ಖಲೀಫ ರಹೀಮ್ ಝುಹ್ರಿ, ಉಳ್ಳಾಲ ಡಿವಿಷನ್ ನಾಯಕರಾದ ಮುಸ್ತಫಾ ಝುಹ್ರಿ, ಸ್ಥಳೀಯ ಇಮಾಂ ಸಲಾಂ ಮದನಿ, ಎಸ್‌ವೈಎಸ್ ಕೆ.ಸಿ.ರೋಡ್ ಸೆಂಟರ್ ಅಧ್ಯಕ್ಷ ಉಮರ್ ಮಾಸ್ಟರ್, ಸುನ್ನೀ ಕೊ ಆರ್ಡಿನೇಶನ್‌ಕನ್ವೀನರ್ ಇಸ್ಮಾಯೀಲ್ ಬಿ.ಎಚ್., ಉಳ್ಳಾಲ ಡಿವಿಷನ್ ಪ್ರ. ಕಾರ್ಯದರ್ಶಿ ಹಮೀದ್‌ತಲಪಾಡಿ, ಜೊತೆ ಕಾರ್ಯದರ್ಶಿ ಶಿಹಾಬುದ್ದೀನ್, ತಲಪಾಡಿ ಸೆಕ್ಟರ್ ಅಧ್ಯಕ್ಷ ಇಸ್ಮಾಯೀಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News