×
Ad

ಒಳಚರಂಡಿಯಲ್ಲಿ ಹರಿಯದ ಡ್ರೈನೇಜ್ ನೀರು : ಬಂಟ್ವಾಳ ಪರಿಸರವಿಡೀ ದುರ್ಗಂಧ !

Update: 2018-04-03 19:01 IST

ಬಂಟ್ವಾಳ, ಎ. 3: ಬಂಟ್ವಾಳ ಪುರಸಭಾ ವ್ಯಾಪ್ತಿಯ 8ನೆ ವಾರ್ಡ್‍ನಲ್ಲಿ ಡ್ರೈನೇಜ್ ಕೊಳಚೆ ನೀರು ಒಳಚರಂಡಿಗಳಲ್ಲಿ ಹರಿಯದೇ ಚರಂಡಿಯಲ್ಲಿಯೇ ನಿಂತು ಪರಿಸವಿಡೀ ದುರ್ನಾತ ಬೀರುತ್ತಿದೆ. ಇದರಿಂದ ಪುರವಾಸಿಗಳು ಆತಂಕಗೊಂಡಿದ್ದು, ಗಂಭೀರ ಅನಾರೋಗ್ಯ ಭೀತಿ ಎದುರಿಸುತ್ತಿದ್ದಾರೆ.

ಡ್ರೈನೇಜ್ ಕೊಳಚೆ ನೀರು ಕೃತಕ ಚರಂಡಿಯ ಮೂಲಕ ಬಾವಿಗಳಿಗೆ ಸೇರುತ್ತಿದ್ದು, ಇದರಿಂದ ಪ್ರತಿ ಮನೆಯ ಬಾವಿಗಳ ನೀರು ಮಲೀನವಾಗಿದೆ. ಇಲ್ಲಿನ ಜನರು ಒಳಚರಂಡಿಯ ನೀರು ಕುಡಿಯುತ್ತಿದ್ದಾರೆ. ಕುಡಿಯಲು ಶುದ್ಧ ನೀರುಕೆಂದು ನಿರ್ಮಿಸಿದ ಬಾವಿಗಳಿಗೂ ಇದು ಸಂಚಕಾರವಾಗಿದೆ.

ಮಳೆಗಾಲದಲ್ಲಿಯೂ ಕೂಡಾ ಮಳೆನೀರಿನ ಹರಿವು ಹೆಚ್ಚಾಗುವ ಮೂಲಕ ಕೃತಕ ಒಳಚರಂಡಿ ಉಂಟಾಗಿ ರಸ್ತೆಯಲ್ಲಿಯೇ ಡ್ರೈನೇಜ್ ನೀರು ಹರಿಯುತ್ತವೆ. ಅಲ್ಲಲ್ಲಿ ಕೊಳಚೆ ನೀರು ನಿಂತಿರುವುದರಿಂದ ಇಲ್ಲಿನ ವಾತಾವರಣವು ಮಲೀನವಾಗಿದೆ.

ಅಲ್ಲದೆ, ರಾತ್ರಿ ಸಮಯದಲ್ಲಿ ಹೆಚ್ಚು ದುರ್ನಾತ. ಕ್ರಿಮಿಕೀಟಗಳು ತುಂಬಿಕೊಂಡಿದ್ದು, ನಾನಾ ಕಾಯಿಲೆಗಳು ನಮ್ಮನ್ನು ಬಾಧಿಸುತ್ತಿವೆ. ಆದ್ದರಿಂದ ಅಧಿಕಾರಿಗಳು ಈ ಸಮಸ್ಯೆಯ ಬಗ್ಗೆ ಗಮನ ಹರಿಸಬೇಕು ಎಂಬುವುದು ಸ್ಥಳೀಯರ ಒತ್ತಾಯಿಸುತ್ತಾರೆ.

ಸಮರ್ಪಕ ಒಳಚರಂಡಿಯನ್ನು ನಿರ್ಮಿಸುವಂತೆ ಇಲ್ಲಿನ ನಿವಾಸಿಗಳು ಕಳೆದ ಕೆಲ ವರ್ಷಗಳಿಂದ ಮನವಿ ನೀಡುತ್ತಾ ಬಂದಿದ್ದರೂ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ನಾಗರಿಕರು ಎಚ್ಚರಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದಲೂ ಪುರಸಭೆಗೆ ಮನವಿ ಸಲ್ಲಿಸಿ, ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ, ಇದಕ್ಕೆ ಅನುದಾನ ಮೀಸಲಿಡಲಾಗಿದೆ ಎಂದು ಹೇಳಲಾಗುತ್ತಿದ್ದರೂ ಕಾಮಗಾರಿಯೂ ಇನ್ನೂ ಪ್ರಾರಂಭವಾಗಿಲ್ಲ.
ಹಾರೂನ್ ರಶೀದ್, ಸ್ಥಳೀಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News