×
Ad

ಕುಂದಾಪುರ ವಕೀಲರ ಸಂಘದ ಪದಾಧಿಕಾರಿಗಳ ಪದಗ್ರಹಣ

Update: 2018-04-03 19:29 IST

ಕುಂದಾಪುರ, ಎ.3: ಕುಂದಾಪುರ ವಕೀಲರ ಸಂಘದ 2018-20ನೆ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಸೋಮವಾರ ಕುಂದಾ ಪುರದ ನ್ಯಾಯಾಲಯದ ಆವರಣದಲ್ಲಿ ಜರಗಿತು.

ಸಮಾರಂಭವನ್ನು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪ್ರಕಾಶ್ ಖಂಡೇರಿ ಉದ್ಘಾಟಿಸಿ ಶುಭಹಾರೈಸಿದರು. ಸಂಘದ ನೂತನ ಅಧ್ಯಕ್ಷ ಸಲ್ವಾಡಿ ನಿರಂಜನ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ವಕೀಲ ಟಿ.ಬಿ.ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಪಿ.ಕುಮಾರಸ್ವಾಮಿ, ಹೆಚ್ಚುವರಿ ಹಾಗೂ ಜೆಎಂಎಫ್ ಸಿ  ನ್ಯಾಯಾಧೀಶ ಚಂದ್ರಶೇಖರ ಬಣಕಾರ, ಪ್ರವೀಣ್ ನಾಯಕ್, ನೂತನ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಪ್ರಮೋದ್ ಹಂದೆ, ಜತೆ ಕಾರ್ಯದರ್ಶಿ ಪಿಂಕಿ ಕರ್ವಾಲೊ, ಕೋಶಾಧಿಕಾರಿ ರಾಘವೇಂದ್ರ ಉಪ್ಪುಂದ ಉಪಸ್ಥಿತರಿದ್ದರು. ಉಪಾಧ್ಯಕ್ಷ ಶಾಜಿ ಅಬ್ರಹಾಂ ಸ್ವಾಗತಿಸಿದರು. ಶ್ರೀಧರ ಪಿ. ಎಸ್. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News