×
Ad

ಖಾಸಗಿ ಕಾರ್ಯಕ್ರಮಕ್ಕೆ ಅನುಮತಿ ಅಗತ್ಯವಿಲ್ಲ: ಜಿಲ್ಲಾಧಿಕಾರಿ

Update: 2018-04-03 21:00 IST

ಉಡುಪಿ, ಎ.3: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ, ಅವರವರ ಮನೆಗಳಲ್ಲಿ ನಡೆಯುವ ಖಾಸಗಿ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಅನುಮತಿ ಪಡೆಯುವ ಅಗತ್ಯವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಸ್ಪಷ್ಟೀಕರಣ ನೀಡಿದ ಅವರು, ರಾಜಕೀಯ ಉದ್ದೇಶಗಳಿಲ್ಲದ, ಸಾರ್ವಜನಿಕ ಸ್ಥಳ, ಕಲ್ಯಾಣಮಂಟಪ, ಸಭಾಂಗಣ, ಸಮುದಾಯ ಭವನ, ದೇವಸ್ಥಾನಗಳಲ್ಲಿ ನಡೆಯುವ ಮದುವೆ, ಉಪನಯನ, ಆರತಕ್ಷತೆಯಂಥ ಖಾಸಗಿ ಕಾರ್ಯಕ್ರಮಗಳನ್ನು ಆಯಾ ಕ್ಷೇತ್ರಗಳ ಚುನಾವಣಾಧಿಕಾರಿಗಳ ಗಮನಕ್ಕೆ ತಂದು ಹಿಂಬರಹ ಪಡೆಯಬೇಕಾಗುತ್ತದೆ. ಇದಕ್ಕೆ ಯಾವುದೇ ಅನುಮತಿಯ ಅಗತ್ಯವಿರುವುದಿಲ್ಲ ಎಂದವರು ಈ ಕುರಿತು ಜನಸಾಮಾನ್ಯರು ಹಾಗೂ ರಾಜಕೀಯ ಪಕ್ಷಗಳ ಮುಖಂಡರಲ್ಲಿ ಉಂಟಾಗಿರುವ ಗೊಂದಲಗಳಿಗೆ ಸ್ಪಷ್ಟನೆ ನೀಡುತ್ತಾ ಪ್ರಿಯಾಂಕ ತಿಳಿಸಿದರು.

ಆದರೆ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಖಾಸಗಿ ಕಾರ್ಯಕ್ರಮಗಳಾದ ಯಕ್ಷಗಾನ, ನಾಟಕ, ಕೋಲ, ದೈವರಾಧನೆಗಳಿಗೆ ಧ್ವನಿವರ್ಧಕ ಬಳಸಲು ಪೊಲೀಸ್ ಇಲಾಖೆಯ ಅನುಮತಿ ಪಡೆಯಬೇಕಾಗುತ್ತದೆ. ಯಕ್ಷಗಾನ, ನಾಟಕ ಸೇರಿದಂತೆ, ರಾಜಕೀಯ ರಹಿತವಾದ ಸಾರ್ವಜನಿಕ ಕಾರ್ಯಕ್ರಮಗಳ ಸಂಘಟಕರು, ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿ ದಾಖಲೆಗಳೊಂದಿಗೆ ಡಿಕ್ಲರೇಷನ್‌ನ್ನು ಆಯಾ ಕ್ಷೇತ್ರಗಳ ಚುನಾವಣಾಧಿಕಾರಿಗಳಿಗೆ ಸಲ್ಲಿಸ ಬೇಕಾಗುತ್ತದೆ. ಯಕ್ಷಗಾನ ಮೇಳಗಳೂ ಇದೇ ರೀತಿಯಲ್ಲಿ ಪೂರ್ವಾನುಮತಿ ಯನ್ನು ಪಡೆಯಬೇಕಾಗುತ್ತದೆ. ಬೆಳಗ್ಗೆ 6ರಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಧ್ವನಿವರ್ಧಕಗಳ ಬಳಕೆಗೆ ಅನುಮತಿ ನೀಡಲಾಗುತ್ತದೆ ಎಂದರು.

ಇನ್ನು ರಾಜಕೀಯ ಪಕ್ಷ ಹಾಗೂ ವ್ಯಕ್ತಿಗಳಿಗೆ ಪ್ರಚಾರ ಹಾಗೂ ಇತರ ಉದ್ದೇಶಗಳಿಗೆ ತ್ವರಿತಗತಿಯಲ್ಲಿ ಅನುಮತಿ ನೀಡಲು ಅನುಕೂಲವಾಗುವಂತೆ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಏಕಗವಾಕ್ಷಿ ಕೊಠಡಿ ತೆರೆಯಲಾಗಿದೆ. ಹೀಗಾಗಿ ರಾಜಕೀಯ ವ್ಯಕ್ತಿಗಳು, ಇದಕ್ಕೆ ಸಂಬಂಧಿಸಿದವರು ಅನುಮತಿಗಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಬರದೇ ಆಯಾ ಆರ್‌ಒ ಕಚೇರಿಗಳಲ್ಲೇ ಅಗತ್ಯವಿರುವ ದಾಖಲೆಗಳನ್ನು ನೀಡಿ 'ಏಕಗವಾಕ್ಷಿ'ಯ ಮೂಲಕ ಅನುಮತಿ ಪಡೆುುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲೆಯಲ್ಲಿ ಈವರೆಗೆ ನೀತಿ ಸಂಹಿತೆ ಉಲ್ಲಂಘನೆಗಾಗಿ ಮೂರು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಅನುಮತಿ ಇಲ್ಲದ ಚುನಾವಣಾ ಪ್ರಚಾರ ವಾಹನ ಬಳಕೆ, ಕೋಟದಲ್ಲಿ ಕರಪತ್ರಗಳ ವಶ, ಕಲ್ಮಾಡಿಯಲ್ಲಿ ಅಂಗನವಾಡಿ ಉದ್ಘಾಟನೆ ಹಾಗೂ ಉಡುಪಿ ನಗರದಲ್ಲಿ ಮುಂಜಾನೆ ಆರೂವರೆ ಗಂಟೆಗೆ ಬಾರೊಂದು ಕಾರ್ಯಾಚರಿಸುತಿದ್ದ ಪ್ರಕರಣಗಳ ಕುರಿತು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸುದ್ದಿಗೊಷ್ಠಿಯಲ್ಲಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ತಿಳಿಸಿದರು.

ಜಿಲ್ಲೆಯಲ್ಲಿ ಈವರೆಗೆ ನೀತಿ ಸಂಹಿತೆ ಉಲ್ಲಂಘನೆಗಾಗಿ ಮೂರು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಅನುಮತಿ ಇಲ್ಲದ ಚುನಾವಣಾ ಪ್ರಚಾರ ವಾಹನ ಬಳಕೆ, ಕೋಟದಲ್ಲಿ ಕರಪತ್ರಗಳ ವಶ, ಕಲ್ಮಾಡಿಯಲ್ಲಿ ಅಂಗನವಾಡಿ ಉದ್ಘಾಟನೆ ಹಾಗೂ ಉಡುಪಿ ನಗರದಲ್ಲಿ ಮುಂಜಾನೆ ಆರೂವರೆ ಗಂಟೆಗೆ ಬಾರೊಂದು ಕಾರ್ಯಾಚರಿಸುತಿದ್ದ ಪ್ರಕರಣಗಳ ಕುರಿತು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸುದ್ದಿಗೊಷ್ಠಿಯಲ್ಲಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ತಿಳಿಸಿದರು. ಅಬಕಾರಿಗೆ ಸಂಬಂಧಿಸಿದಂತೆ ನಿಯಮ ಉಲ್ಲಂಘಿಸಿದ ಕುಂದಾಪುರದ ಐದು ಹಾಗೂ ಉಡುಪಿಯ ಎರಡು ಬಾರ್‌ಗಳ ಪರವಾನಿಗೆಯನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಅಪರ ಜಿಲ್ಲಾಧಿಕಾರಿ ಅನುರಾಧ ಉಪಸ್ಥಿತರಿದ್ದರು.

ಮಿಂಚಿನ ನೊಂದಣಿ
ಮಿಂಚಿನ ನೊಂದಣಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಇದೇ ಎ.8ರ ರವಿವಾರದಂದು 'ಮಿಂಚಿನ ನೊಂದಣಿ' ಎಂಬ ಹೆಸರಿನಲ್ಲಿ ವಿಶೇಷ ಅಭಿಯಾನವನ್ನು ಉಡುಪಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 10ರಿಂದ ಸಂಜೆ 5:30ರ ವರೆಗೆ ಜಿಲ್ಲೆಯ ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದು ಮತದಾರರ ಪಟ್ಟಿ ಪರಿಷ್ಕರಣೆಯ ವಿಶೇಷ ಅಭಿಯಾನ ನಡೆಸುತ್ತಾರೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದರು.

ಈ ವೇಳೆ ಇದುವರೆಗೂ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿ ಸದವರಿಗೆ ಮತ್ತೊಂದ ಅವಕಾಶ ಸಿಗಲಿದೆ. ಅಂದು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಹೆಸರು ತೆಗೆದು ಹಾಕಲು ಅರ್ಜಿಯನ್ನು ಸ್ವೀಕರಿಸಲಾಗುತ್ತದೆ. ಅಲ್ಲದೇ ಮತದಾನದ ಕುರಿತು ಮತದಾರರಲ್ಲಿ ಅರಿವು, ಜಾಗೃತಿ ಮೂಡಿಸುವ ಕೆಲಸವೂ ನಡೆಯಲಿದೆ ಎಂದರು.

ಹೆಸರು ಸೇರ್ಪಡೆಗೆ ಎ.14ರವರೆಗೆ ಅವಕಾಶ
ಮುಂದಿನ ತಿಂಗಳು ರಾಜ್ಯದಲ್ಲಿ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆ ಯಲ್ಲಿ ಮತದಾನ ಮಾಡಲು ಈವರೆಗೆ ಹೆಸರು ನೊಂದಾಯಿಸದವರಿಗೆ ಕೊನೆಯ ಕ್ಷಣದಲ್ಲಿ ಹೆಸರು ನೊಂದಾಯಿಸಿ ಮತದಾನದ ಹಕ್ಕು ಚಲಾಯಿಸುವುದಕ್ಕೆ ಎ.14ರವರೆಗೆ ಅವಕಾಶ ದೊರೆಯಲಿದೆ.

ಮುಂದಿನ ತಿಂಗಳು ರಾಜ್ಯದಲ್ಲಿ ನಡೆಯುವ ರಾಜ್ಯ ವಿಾನಸಾ ಚುನಾವಣೆ ಯಲ್ಲಿ ಮತದಾನ ಮಾಡಲು ಈವರೆಗೆ ಹೆಸರು ನೊಂದಾಯಿಸದವರಿಗೆ ಕೊನೆಯ ಕ್ಷಣದಲ್ಲಿ ಹೆಸರು ನೊಂದಾಯಿಸಿ ಮತದಾನದ ಹಕ್ಕು ಚಲಾಯಿಸುವುದಕ್ಕೆ ಎ.14ರವರೆಗೆ ಅವಕಾಶ ದೊರೆಯಲಿದೆ. ಚುನಾವಣಾ ಪೂರ್ವ ನಿಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೊಂದಾಯಿ ಸಲು ಈ ಅವಕಾಶವನ್ನು ಉಪಯೋಗಿಸಿಕೊಳ್ಳುವಂತೆ ಹಾಗೂಹೆಚ್ಚಿನ ಮಾಹಿತಿಗೆ ಹತ್ತಿರದ ಬಿಎಲ್‌ಓರನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಚುನಾವಣಾ ಪೂರ್ವ ನಿಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೊಂದಾಯಿ ಸಲು ಈ ಅವಕಾಶವನ್ನು ಉಪಯೋಗಿಸಿಕೊಳ್ಳುವಂತೆ ಹಾಗೂಹೆಚ್ಚಿನ ಮಾಹಿತಿಗೆ ಹತ್ತಿರದ ಬಿಎಲ್‌ಓರನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು. 2018ರ ಜ.1ಕ್ಕೆ ಅಥವಾ ಅದಕ್ಕೂ ಮುಂಚೆ 18 ವರ್ಷ ಪೂರ್ಣ ಗೊಂಡಿರುವವರು ನಮೂನೆ 6ರಲ್ಲಿ ಅರ್ಜಿಯನ್ನು ಭರ್ತಿಮಾಡಿ, ಅಗತ್ಯ ವಿಳಾಸದ ದಾಖಲಾತಿ ಹಾಗೂ ವಯಸ್ಸಿನ ದಾಖಲಾತಿಯನ್ನು ಸಲ್ಲಿಸಿ, ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರ್ಪಡೆ ಮಾಡಬಹುದಾಗಿದೆ.

ಅಲ್ಲದೇ ಎಲ್ಲಾ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವ ಬಗ್ಗೆ ಮತಗಟ್ಟೆ ಮಟ್ಟದ ಅಧಿಕಾರಿಗಳ ಬಳಿ ಇರುವ ಮತದಾರರ ಪಟ್ಟಿ ಪರಿಶೀಲಿಸಿ ಖಾತ್ರಿ ಪಡಿಸಿಕೊಳ್ಳುವಂತೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News