×
Ad

ಮಾಹೆಯಲ್ಲಿ ಫಿಲಿಪ್ಸ್‌ರ 'ಹೆಲ್ತ್‌ಸೂಟ್ ಇನ್‌ಸೈಟ್ಸ್' ಲ್ಯಾಬ್

Update: 2018-04-03 21:43 IST

ಮಣಿಪಾಲ, ಎ.3: ಆರೋಗ್ಯ ತಂತ್ರಜ್ಞಾನದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಫಿಲಿಪ್ಸ್ ಇನ್ನೊವೇಷನ್ ಕ್ಯಾಂಪಸ್, ಮಣಿಪಾಲ ಮಾಹೆ ವಿವಿಯ ಸ್ಕೂಲ್ ಆಫ್ ಇನ್‌ಫಾರ್ಮೇಶನ್ ಸಾಯನ್ಸ್‌ನಲ್ಲಿ ತಮ್ಮ ಹೆಲ್ತ್‌ಸೂಟ್ ಇನ್‌ಸೈಟ್ಸ್ ಪ್ರಯೋಗಾಲಯವನ್ನು ಬುಧವಾರ ಇಲ್ಲಿ ತೆರೆದಿದೆ.

ಫಿಲಿಪ್ಸ್ ಹೆಲ್ತ್‌ಸೂಟ್ ಇನ್‌ಸೈಟ್ಸ್, ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಹಾಗೂ ವಿಶ್ಲೇಷಣಾತ್ಮಕತೆಗಳನ್ನು ಆರೋಗ್ಯ ನಿರ್ವಹಣೆ ಹಾಗೂ ಆರೋಗ್ಯ ಶುಶ್ರೂಷೆಗೆ ಬಳಸಿಕೊಳ್ಳಲು ಬೇಕಾದ ತಂತ್ರಜ್ಞಾನ ಹಾಗೂ ಉಪಕರಣಗಳ ಬೆಂಬಲವನ್ನು ಒದಗಿಸುತ್ತದೆ.

ಹೆಲ್ತ್‌ಸೂಟ್ ಇನ್‌ಸೈಟ್ಸ್ ಆರೋಗ್ಯ ಶುಶ್ರೂಷೆಗೆ ಅಗತ್ಯರುವ ಪರಿಹಾರಗಳ ನಿರ್ಮಾಣ, ನಿರ್ವಹಣೆ, ಅಳವಡಿಕೆಗೆಬೇಕಾದ ನಿರ್ದಿಷ್ಟ ಉಪಕರಣ ಹಾಗೂ ತಂತ್ರಜ್ಞಾನಗಳನ್ನು ವಿತರಿಸುತ್ತದೆ ಎಂದು ಫಿಲಿಪ್ಸ್ ಇನ್ನೋವೇಷನ್ ಕ್ಯಾಂಪಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.

ಹೆಲ್ತ್‌ಸೂಟ್, ಡಾಟಾ ವಿಜ್ಞಾನಿಗಳು, ಸಾಫ್ಟ್‌ವೇರ್ ನಿರ್ವಾಹಕರನ್ನು, ಆರೋಗ್ಯ ನಿರ್ವಾಹಕರು ಹಾಗೂ ಕ್ಲಿನಿಕ್ ನಿರ್ವಾಹಕರನ್ನು ನೀಡಿ ಅವರ ಮೂಲಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಬೇಕಾದ ಅಂಕಿಅಂಶ ಹಾಗೂ ಇತರ ಸೇವೆಗಳನ್ನು ಒದಗಿಸಿ, ರೋಗಿಯೊಬ್ಬರ ಚಿಕಿತ್ಸೆಯಲ್ಲಿ ವೈದ್ಯರಿಗೆ ವಿಶೇಷ ನೆರವನ್ನು ನೀಡುತ್ತದೆ ಎಂದವರು ವಿವರಿಸಿದರು.

ಮಾಹೆ ಹಾಗೂ ಫಿಲಿಪ್ಸ್ ಕಳೆದ 15 ವರ್ಷಗಳಿಂದ ವಿವಿಧ ಸಂಶೋಧನೆಯು ಸೇರಿದಂತೆ ಅನೇಕ ಸಹಭಾಗಿತ್ವವನ್ನು ಹೊಂದಿದ್ದು, ಇಂದು ಹೆಲ್ತ್‌ಸೂಟ್ ಇನ್‌ಸೈಟ್‌ನ್ನು ನಾವು ಮಾಹೆಯಲ್ಲಿ ಅಳವಡಿಸುತಿದ್ದೇವೆ. ಇದು ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ವೈದ್ಯ ತಜ್ಞರಿಗೆ ಬೇಕಾದ ಎಲ್ಲಾ ಮಾಹಿತಿಗಳನ್ನು ಕ್ಷಣ ಮಾತ್ರದಲ್ಲಿ ಒದಗಿಸಿಕೊಡುತ್ತದೆ. ಜೊತೆಗೆ ಆಸ್ಪತ್ರೆಗಳ ಪ್ರತ್ಯೇಕ ವಿಭಾಗಗಳಲ್ಲಿ ಕಾರ್ಯಕ್ಷಮತೆಯನ್ನು ಸುಧಾರಿಸಲು ನೆರವಾಗುತ್ತದೆ. ಅಲ್ಲದೇ ಸರಿಯಾದ ವೈದ್ಯಕೀಯ ನಿರ್ಣಯ ಕೈಗೊಳ್ಳಲು ಸಹಾಯ ಮಾಡುತ್ತದೆ ಎಂದರು.

ಮಾಹೆ ಕುಲಪತಿ ಡಾ.ಎಚ್.ವಿನೋದ್ ಭಟ್ ಮಾತನಾಡಿ, ಫಿಲಿಪ್ಸ್ ಇಂದು ನೀಡಿರುವ ಈ ಸೌಲಭ್ಯ ವಿವಿಯ ಸಂಶೋಧಕರು, ವಿದ್ಯಾರ್ಥಿಗಳಿಗೆ ಅಂತರ ವಿಭಾಗೀಯ ಸಂಶೋಧನೆಗೆ ಹಾಗೂ ಸಮುದಾಯಕ್ಕೆ ನೆರವಾಗುವ ಪರಿಹಾರಗಳನ್ನು ನೀಡಲು ಸಹಾಯಕವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಎಂಐಟಿಯ ಆವರಣದಲ್ಲಿರುವ ಸ್ಕೂಲ್ ಆಫ್ ಇನ್‌ಫಾರ್ಮೇಶನ್ ಸಾಯನ್ಸ್‌ನನಲ್ಲಿ ಹೆಲ್ತ್‌ಸೂಟ್ ಇನ್‌ಸೈಟ್ಸ್ ಲ್ಯಾಬ್‌ನ್ನು ಶ್ರೀನವಾಸ ಪ್ರಸಾದ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಾ.ವಿನೋದ್ ಭಟ್, ಡಾ.ಹರಿಶ್ಚಂದ್ರ ಭಟ್, ಡಾ.ವಿಜಯಾನಂದ, ಡಾ.ಮಂಜುನಾಥ ಮಯ್ಯ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News