ಮುದ್ರಾಡಿ ಆದಿಶಕ್ತಿ ಕ್ಷೇತ್ರದ ವಾರ್ಷಿಕೋತ್ಸವ
ಹೆಬ್ರಿ, ಎ.3: ಮುದ್ರಾಡಿ ನಾಟ್ಕದೂರು ಆದಿಶಕ್ತಿ ದೇವಸ್ಥಾನ, ನಂದಿಕೇಶ್ವರ ದೇವಸ್ಥಾನ, ಗುರು ರಾಘವೇಂದ್ರ ಬೃಂದಾವನ, ಬ್ರಹ್ಮಬೈದರ್ಕಳ ಗರಡಿಯಲ್ಲಿ 47ನೇ ವರ್ಷದ ವಾರ್ಷಿಕೋತ್ಸ ಎ.4ರಿಂದ 10ರವರೆಗೆ ನಡೆಯಲಿದೆ.
ಎ.6ರಂದು ಧರ್ಮರಸು ಕೊಡಮಣಿತ್ತಾಯ ಕುಕ್ಕಿನಂತಾಯ ನೇಮ, 7ರಂದು ಬ್ರಹ್ಮಬೈದರ್ಕಳ ನೇಮೋತ್ಸವ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. 7ರಂದು ಸಂಜೆ ಶ್ರೀಕ್ಷೇತ್ರದ ತುಳುವೆರೆ ಚಾವಡಿಯಲ್ಲಿ ಧಾರ್ಮಿಕ ಸಭೆಯು ಮಾಜಿ ಶಾಸಕ ಎಚ್. ಗೋಪಾಲ ಭಂ ಡಾರಿ ಅಧ್ಯಕ್ಷತೆ ಯಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ ವರಂಗ ವಿಠ್ಠಲ ಪೂಜಾರಿ, ಉಡುಪಿ ಮಂಜುನಾಥ ಹೆಬ್ಬಾರ್, ಉಡುಪಿಯ ಸಿ.ಎ. ಗಣೇಶ ಹೆಬ್ಬಾರ್, ಕಬ್ಬಿನಾಲೆ ಮಲ್ಲಿಕಾರ್ಜುನ ಹೆಬ್ಬಾರ್, ಸಾಹಿತಿ ರತ್ನಾಕರ ರಾವ್, ಮನೋಜ್ ಸಿ.ಪೂಜಾರಿ, ಕೆ. ಎಸ್. ಅಂಚನ್ ಸೂರತ್ ಮತ್ತು ವಿವಿಧ ಗರಡಿಗಳ ಪೂಜಾರಿಗಳನ್ನು ಸನ್ಮಾನಿಸಲಾಗುವುದು.
ಚಿಕ್ಕಮಗಳೂರಿನ ನಿತ್ಯಾನಂದ ಸ್ವಾಮೀಜಿ, ವಿಖ್ಯಾತನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಕಾಪು ಶಾಸಕ ವಿನಯ ಕುಮಾರ್ ಸೊರಕೆ, ವರಂಗ ಜೈನ ಮಠದ ಯುವರಾಜ ಅರಿಗ, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಮುದ್ರಾಡಿ ಗ್ರಾಪಂ ಅಧ್ಯಕ್ಷೆ ಶಶಿಕಲಾ ಪೂಜಾರಿ ಮುಂತಾದವರು ಉಪಸ್ಥಿತರಿರುವರು ಎಂದು ಕ್ಷೇತ್ರದ ಧರ್ಮದರ್ಶಿ ಧರ್ಮಯೋಗಿ ಮೋಹನ್ ತಿಳಿಸಿದ್ದಾರೆ.