ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ವಾಲ್ಟರ್ ನೊರೊನ್ಹಾಗೆ ಸನ್ಮಾನ
Update: 2018-04-03 22:08 IST
ಬಂಟ್ವಾಳ, ಎ. 3: ಕ್ಯಾಥೋಲಿಕ್ ಸಭಾ ಬಂಟ್ವಾಳ ವಲಯ ಸಮಿತಿಯಿಂದ ಕ್ಯಾಥೋಲಿಕ್ ಸಭಾ ಸ್ಥಾಪಕ ಅಧ್ಯಕ್ಷ, ವಿವಿ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡ ವಾಲ್ಟರ್ ನೊರೊನ್ಹಾ ಅವರನ್ನು ಮೊಡಂಕಾಪು ಚರ್ಚ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಗಳವಾರ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕ್ಯಾಥೋಲಿಕ್ ಬಂಟ್ವಾಳ ವಲಯದ ಪ್ರಧಾನ ಧರ್ಮಗುರು ಮ್ಯಾಕ್ಸಿಂ ನೊರೊನ್ಹಾ, ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶ ಅಧ್ಯಕ್ಷ ಅನಿಲ್ ಲೋಬೊ, ಸ್ಟೇನ್ಲಿ ಲೋಬೊ, ಕಾರ್ಯದರ್ಶಿ ಫ್ರಾನ್ಸಿಸ್ ಡೇಸಾ, ಬಂಟ್ವಾಳ ವಲಯ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.