ವೈಟ್ ಲಿಫ್ಟಿಂಗ್, ಹಾಕಿ ಕ್ರೀಡೆ : ಎ.7ರಿಂದ ಉಚಿತ ತರಬೇತಿ

Update: 2018-04-03 16:54 GMT

ಮಂಗಳೂರು, ಎ.3: ಯುವ ಸಬಲೀಕರಣ ಮತ್ತು ಕೀಡಾ ಇಲಾಖೆಯ ವತಿಯಿಂದ 2018ನೆ ಸಾಲಿನಲ್ಲಿ ವೈಟ್ ಲಿಫ್ಟಿಂಗ್ ಮತ್ತು ಹಾಕಿ ಕ್ರೀಡೆಗಳಲ್ಲಿ ಉಚಿತ ಬೇಸಿಗೆ ತರಬೇತಿ ಶಿಬಿರವನ್ನು ನಡೆಸಲಾಗುವುದು.

ಶಿಬಿರವು ಎ.7 ರಿಂದ 27 ರವರೆಗೆ ಮಂಗಳಾ ಕ್ರೀಡಾಂಗಣ ಸಂಕೀರ್ಣದಲ್ಲಿರುವ ಕರಾವಳಿ ಉತ್ಸವ ಮೈದಾನದಲ್ಲಿ ಬೆಳಗ್ಗೆ 9 ಗಂಟೆಯಿಂದ 11:30ರವರೆಗೆ ನಡೆಸಲಾಗುವುದು.

ಹಾಕಿ ಕ್ರೀಡೆಯಲ್ಲಿ ಬೇಸಿಗೆ ತರಬೇತಿ ಶಿಬಿರವನ್ನು ಎ.22ರವರೆಗೆ ಬಜ್ಪೆಯ ಪಾಪ್ಯುಲರ್ ಬಂಟ್ಸ್, ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೆಳಗ್ಗೆ 8:30 ರಿಂದ 10:30ರವರೆಗೆ ನಡೆಯಲಿದೆ.

ಆಯಾ ಕ್ರೀಡೆಗಳಲ್ಲಿ ನಡೆಯುವ ಬೇಸಿಗೆ ತರಬೇತಿ ಶಿಬಿರದಲ್ಲಿ ಭಾಗವಹಿಸಲು ಆಸಕ್ತಿ ಇರುವ ವಿದ್ಯಾರ್ಥಿಗಳು ಮೇಲೆ ತಿಳಿಸಿದ ದಿನಾಂಕ ಹಾಗೂ ಸ್ಥಳಗಳಲ್ಲಿ ಸಂಬಂಧಪಟ್ಟ ತರಬೇತುದಾರರನ್ನು ಸಂಪರ್ಕಿಸಿ ವರದಿ ಮಾಡಿಕೊಳ್ಳುವಂತೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂ. 0824-2451264ವನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News