×
Ad

ವಿದ್ಯಾವಂತರು ಮತಚಲಾವಣೆ ಹಿಂದುಳಿದಿರುವುದು ವಿಷಾದನೀಯ: ಡಾ.ಶಾಂತಾರಾಮ ಶೆಟ್ಟಿ

Update: 2018-04-05 16:55 IST

ಮಂಗಳೂರು, ಎ.5: ವಿದ್ಯಾವಂತರು ಮತ ಚಲಾವಣೆಯಲ್ಲಿ ಹಿಂದುಳಿದಿರುವುದು ವಿಷಾದನೀಯ ಎಂದು ನಿಟ್ಟೆ ವಿಶ್ವವಿದ್ಯಾಲಯದ ಉಪ ಕುಲಾಧಿಪತಿ ಡಾ.ಶಾಂತಾರಾಮ ಶೆಟ್ಟಿ ತಿಳಿಸಿದ್ದಾರೆ.

ದ.ಕ ಜಿಲ್ಲಾ ಸ್ವೀಪ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಪುರಭವನದಲ್ಲಿ ನಾನು ಮತ ಚಲಾಯಿಸುತ್ತೇನೆ ಎಂಬ ವಿಷಯದ ಬಗ್ಗೆ ಬಹುಭಾಷಾ ಕವಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಮತದಾನ ಸಂವಿಧಾನ ನೀಡಿದ ಮಹತ್ವದ ಹಕ್ಕು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿದೆ. ಯುವಜನರು ಚುನಾವಣೆ ಯಲ್ಲಿ ಮಹತ್ವದ ಪಾತ್ರ ವಹಿಸಿ ದೇಶ ಕಟ್ಟುವಲ್ಲಿ ಪಾತ್ರ ವಹಿಸಬೇಕು. ಯೋಗ್ಯ ರನ್ನು ಆರಿಸಿ. ಹಿಂದಿನ ರಾಜಕೀಯ ಪ್ರತಿನಿಧಿಗಳಲ್ಲಿ ನಿಸ್ವಾರ್ಥ ಮನೋಭಾವ ಇತ್ತು. ಇತ್ತೀಚಿನ ದಿನಗಳಲ್ಲಿ ಈ ಮೌಲ್ಯ ಕಡಿಮೆಯಾಗುತ್ತಿದೆ ಎಂದು ಶಾಂತರಾಮ ಶೆಟ್ಟಿಯವರು ತಿಳಿಸಿದ್ದಾರೆ.

ಈ ಸಂದರ್ಭ ಪ್ರಸನ್ನ ಮಂಗಳೂರು ವಿಶ್ವ ವಿದ್ಯಾನಿಲಯ,  ಅರುಣಾ ನಾಗರಾಜ್ ಉರ್ವ , ವಿವೇಕ್ ಪೂಂಜಾ  ಕೋಟೆಕಾರ್, ಶರಣಪ್ಪ ಮರಕಡ , ಶ್ಯಾಮಲ ರವಿರಾಜ್  ಕುಂಬಳೆ, ಸುಧಾಶ್ರೀ ಧರ್ಮಸ್ಥಳ, ಲಕ್ಷ್ಮೀ ಮಚ್ಚಿನ ಬೆಳ್ತಂಗಡಿ, ಚಂದ್ರಿಕಾ ಎಂ ಶೆಣೈ ಮುಳ್ಳೇರಿಯಾ, ಅರವಿಂದ ಪ್ರಭು ಮಂಗಳೂರು ಹಾಗು ಸತ್ಯವತಿ ಎಸ್ ಭಟ್ ಯೆಯ್ಯಾಡಿ ಕನ್ನಡ ಕವನ ವಾಚಿಸಿದರು.

ನಾರಾಯಣ ರೈ ಕುಕ್ಕುವಳ್ಳಿ, ನಿಡ್ಪಳ್ಳಿ ಹಾಗು  ವಿದ್ವತ್ ಶೆಟ್ಟಿ ಮಂಗಳೂರು  ತುಳು ಕವನ ವಾಚಿಸಿದವರು. 

ವಿಶ್ವನಾಥ್  ಕೋಡಿಕಲ್ ಇಂಗ್ಲೀಷ್ ಕವನ ವಾಚಿಸಿದವರು. ಡಾ. ದುರ್ಗಾರತ್ನ ಪುತ್ತೂರು ಹಿಂದಿ ಕವನ ವಾಚಿಸಿದವರು. ಜ್ಯೂಲಿಯೆಟ್ ಫೆರ್ನಾಂಡಿಸ್ ಬಿಜೈ ಮಂಗಳೂರು, ಚಾರ್ಲ್ಸ್ ಡಿಸೋಜ ಯೆಯ್ಯಾಡಿ ಕೊಂಕಣಿ ಕವನ ವಾಚಿಸಿದವರು. ಶಂಶೀರ್ ಬುಡೋಳಿ, ಬ್ಯಾರಿ ಕವನ ವಾಚಿಸಿದವರು.

ಸಮಾರಂಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಎಂ.ಆರ್.ರವಿ, ಕವಿ ದುಂಡಿರಾಜ್ ಮೊದಲಾದವರು ಉಪಸ್ಥಿತರಿದ್ದರು. ಮನೋಹರ ಪ್ರಸಾದ್‌ ಕಾರ್ಯ ಕ್ರಮ ನಿರೂಪಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News