ಎಚ್ಚರದಿಂದ ಮತದಾನ ಮಾಡಬೇಕಾಗಿದೆ

Update: 2018-04-05 18:27 GMT

ಮಾನ್ಯರೇ,

ಕರ್ನಾಟಕ ಇದೀಗ ಚುನಾವಣೆಯನ್ನು ಎದುರು ನೋಡುತ್ತಿದೆ. ಇಡೀ ದೇಶದ ಗಮನ ಕರ್ನಾಟಕದತ್ತ ಹರಿದಿದೆ. ತ್ರಿಪುರಾ, ಗುಜರಾತ್ ಚುನಾವಣೆಯ ಬಳಿಕ ಕರ್ನಾಟಕದ ಚುನಾವಣೆ ಹೆಚ್ಚು ಮಹತ್ವ ಪಡೆದಿದೆ. ವೇಗ ಹೆಚ್ಚಿಸಿಕೊಂಡ ಚುನಾವಣಾ ಪ್ರಚಾರಗಳು ಒಂದಲ್ಲಾ ಒಂದು ರೀತಿಯಲ್ಲಿ ಮತದಾರರನ್ನು ತಮ್ಮೆಡೆ ಸೆಳೆದುಕೊಳ್ಳುವ ಬಿರುಸಿನ ಪ್ರಕ್ರಿಯೆಯಲ್ಲಿದೆ.

ಮುಖ್ಯವಾಗಿ, ಈ ಬಾರಿ ಮತದಾರ ಹೆಚ್ಚು ಜಾಗರೂಕನಾಗಿರಬೇಕಾದ ಪರಿಸ್ಥಿತಿಯಿದೆ. ಜಾತ್ಯತೀತ ಮತದಾರ ಬಯಸುವುದು ಕೋಮುದ್ವೇಷ ಮುಕ್ತ, ಸೌಹಾರ್ದ ಬಾಳಿನ ಸುಂದರ ಕರ್ನಾಟಕವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರ ಮತವೂ ಮಹತ್ವದ್ದು. ಹಾಗಾಗಿ ನಮ್ಮ ಒಂದೊಂದು ಮತವೂ ಕರ್ನಾಟಕದ ಶ್ರೇಯಸ್ಸಿಗೆ ವಿನಿಯೋಗವಾಗಬೇಕಿದೆ. ವಿವೇಚನೆಯಿಂದ ಮತ ಚಲಾಯಿಸುವುದು ಕರ್ನಾಟಕದ ಭವಿಷ್ಯತ್ತಿಗೆ ಪೂರಕ.

ಅಸಂಬದ್ಧ ಮಾತುಗಳನ್ನಾಡುವ, ಜನಾಂಗೀಯ ದ್ವೇಷ ಸಾಧನೆಯನ್ನು ಮಾಡುವ ಪ್ರತಿನಿಧಿಗಳು ರಾಜ್ಯಕ್ಕೆ ಶೋಭೆ ತರಲಾರರು. ಅದು ನಮ್ಮ ನಡುವಿನ ಭ್ರಾತೃತ್ವದ ಕೊಂಡಿಯನ್ನು ಉಳಿಸುವುದಿಲ್ಲ. ಕೋಮು ಸಾಮರಸ್ಯದ ಸಮಾಧಾನಕರ ಬಾಳಿಗೆ ಬೇಕಾದ ಕರ್ನಾಟಕದ ಭವಿಷ್ಯವನ್ನು ಉಜ್ವಲಗೊಳಿಸಬೇಕಾದವರು ನಾವೇ. ಈ ನಿಟ್ಟಿನಲ್ಲಿ ‘ನನ್ನ ಮತ ಕರ್ನಾಟಕದ ಭವಿಷ್ಯಕ್ಕೆ’ ಎನ್ನುವ ಪ್ರಜ್ಞೆ ಮೂಡುವುದು ಅಗತ್ಯವಾಗಿದೆ. ಯಾವುದೇ ಪಕ್ಷಗಳನ್ನು ಧರ್ಮದ ಭಾಗವಾಗಿ ನೋಡದೆ ಪ್ರಜ್ಞಾವಂತ, ನಿಷ್ಠಾವಂತ ಸರಕಾರಕ್ಕಾಗಿ ‘‘ಪಕ್ಷ ಯಾವುದಾದರೂ ಸರಿ ನನ್ನ ಲಕ್ಷ್ಯ ಸದೃಢ ಸುಭದ್ರ ಕರ್ನಾಟಕವೇ ಹೊರತು ಧರ್ಮಕಲಹವಲ್ಲ’’ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಹಾಗಾಗಿ ನಮ್ಮೆಲ್ಲರ ಕರ್ನಾಟಕ ಶ್ರೇಷ್ಠ ಕರ್ನಾಟಕವಾಗಲು ನಮ್ಮ ಮತ ಯೋಗ್ಯರಿಗೆ ವಿನಿಯೋಗವಾಗಲಿ. ಸೂಕ್ತ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಸದೃಢ ಕರ್ನಾಟಕವನ್ನು ಕಟ್ಟೋಣ.

-ಜಿ. ಅಬ್ದುರ್ರಹ್ಮಾನ್, ಕಕ್ಯಪದವು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News