×
Ad

ಎ. 7ರಂದು ಉಳ್ಳಾಲದಲ್ಲಿ ಎಸ್‌ಕೆಎಸ್‌ಎಸ್‌ಎಫ್ ಸಮ್ಮೇಳನ

Update: 2018-04-06 18:28 IST

ಪುತ್ತೂರು, ಎ. 6: ಉಳ್ಳಾಲದಲ್ಲಿ ಎ. 7ರಂದು ಎಸ್‌ಕೆಎಸ್‌ಎಸ್‌ಎಫ್ ಸಂಘಟಿಸುವ ಸಮ್ಮೇಳನಕ್ಕೆ ಪುತ್ತೂರು ತಾಲೂಕು ಸಮಸ್ತ ಜಂಇಯ್ಯತುಲ್ ಉಲಮಾ ದಿಂದ 10000 ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಪುತ್ತೂರು ತಾಲೂಕು ಸಮಸ್ತ ಜಂಇಯ್ಯತುಲ್ ಉಲಮಾದ ಸಂಘಟನಾ ಕಾರ್ಯದರ್ಶಿ ಕೆ.ಆರ್. ಹುಸೈನ್ ದಾರಿಮಿ ರೆಂಜಲಾಡಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎ. 7ರಂದು ಬೆಳಗ್ಗೆ 9ಕ್ಕೆ ಮುಅಲ್ಲಿಂ ಜಿಲ್ಲಾ ಸಮಾವೇಶ ನಡೆಯಲಿದ್ದು, ಕೇರಳದ ಚಿಂತಕ ಹಾಗೂ ಲೇಖಕ ಪಿಣಂಗೋಡ್ ಅಬೂಬಕರ್ ಆಧುನಿಕ ಯುಗದಲ್ಲಿ ಮುಅಲ್ಲಿಮರ ಪ್ರಾತಿನಿಧ್ಯ ಎಂಬ ವಿಷಯ ಮಂಡಿಸಲಿದ್ದಾರೆ. ಬೆಳಿಗ್ಗೆ 11.30ಕ್ಕೆ ರಾಜ್ಯ ಫೈಝೀಸ್ ಪದವೀಧರ ಸಂಗಮ ನಡೆಯಲಿದ್ದು, ವಿದ್ವಾಂಸ ಶೈಖುನಾ ಎಂ.ಟಿ. ಅಬ್ದುಲ್ ಮುಸ್ಲಿಯಾರ್ ಮುಖ್ಯಪ್ರಭಾಷಣ ಮಾಡಲಿದ್ದಾರೆ.

ಮಧ್ಯಾಹ್ನ 2ಕ್ಕೆ ತ್ವಲಬಾ-ಇಬಾದ್ ಕಾನ್ಫರೆನ್ಸ್ ನಡೆಯಲಿದೆ. ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಯ್ಯದ್ ಎನ್.ಪಿ.ಎಂ. ಝೈನುಲ್ ಆಬಿದೀನ್ ತಂಙಳ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News