ಕಡಬ: ಟೆಲಿಫೋನ್ ಕಂಬಕ್ಕೆ ಲಾರಿ ಢಿಕ್ಕಿ; ಪಾದಚಾರಿ ಮೃತ್ಯು
Update: 2018-04-07 15:56 IST
ಕಡಬ, ಎ. 7: ಸಾಫ್ಟ್ ಡ್ರಿಂಕ್ಸ್ ಸಾಗಾಟದ ವಾಹನವೊಂದು ಟೆಲಿಫೋನ್ ಕಂಬಕ್ಕೆ ಢಿಕ್ಕಿ ಹೊಡೆದು, ಕಂಬ ತಲೆಯ ಮೇಲೆ ಬಿದ್ದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಆಲಂಕಾರಿನಲ್ಲಿ ಶನಿವಾರ ಅಪರಾಹ್ನ ನಡೆದಿದೆ.
ಮೃತರನ್ನು ಕಡಬ ತಾಲೂಕಿನ ಪೆರಾಬೆ ಗ್ರಾಮದ ಬಾಲಾಜೆ ನಿವಾಸಿ ಗಿರೀಶ್ (43) ಎಂದು ಗುರುತಿಸಲಾಗಿದೆ.
ಆಲಂಕಾರು ಸಮೀಪ ಟೆಲಿಫೋನ್ ಕಂಬಕ್ಕೆ ಭವಾನಿ ಸಾಫ್ಟ್ ಡ್ರಿಂಕ್ ಸಾಗಾಟದ ವಾಹನ ಹಿಮ್ಮುಖವಾಗಿ ಚಲಿಸಿ ಢಿಕ್ಕಿ ಹೊಡೆದಿದ್ದು, ಈ ಸಂದರ್ಭ ಟೆಲಿಫೋನ್ ಕಂಬ ಪಾದಚಾರಿ ಗಿರೀಶ್ ಅವರ ತಲೆಯ ಮೇಲೆ ಬಿದ್ದಿದ್ದು, ತಕ್ಷಣ ಗಿರೀಶ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಗಂಭೀರ ಗಾಯಗೊಂಡ ಅವರು ಮೃತಪಟ್ಟರು ಎಂದು ತಿಳಿದುಬಂದಿದೆ.