ವಿಧಾನಸಭೆ ಚುನಾವಣೆ: ಬೆಳ್ತಂಗಡಿಯಲ್ಲಿ ಸ್ಪರ್ಧೆ ಖಚಿತಪಡಿಸಿದ ಎಸ್.ಡಿ.ಪಿ.ಐ

Update: 2018-04-07 11:27 GMT

ಬೆಳ್ತಂಗಡಿ, ಎ. 7: ರಾಜ್ಯ ವಿಧಾನ ಸಭಾ ಚುನಾವಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು ಪ್ರಚಾರಾಂದೋಲನ ಭರದಿಂದ ಸಾಗಿದೆ. ಈ ಹಿಂದೆ ರಾಜ್ಯದ 50 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದ ಎಸ್.ಡಿ.ಪಿ.ಐ ರಾಜ್ಯ ಸಮಿತಿಯು ಈಗಾಗಲೇ ಹಲವು ಕಡೆ ಅಭ್ಯರ್ಥಿಗಳನ್ನು ಕಣಕ್ಕಿಲಿಸಿದೆ.

ಇದರ ಭಾಗವಾಗಿ ಚುನಾವಣಾ ಪೂರ್ವಭಾವಿ ಸಭೆಯು ಬೆಳ್ತಂಗಡಿಯ ಗುರುನಾರಯಣ ಸಂಕೀರ್ಣ ಸಭಾ ಭವನದಲ್ಲಿ ನಡೆದು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ನಿಲ್ಲಿಸುವುದೆಂದು ಕಾರ್ಯಕರ್ತರ ಒಕ್ಕೊರಲ ಅಭಿಪ್ರಾಯದಂತೆ ತೀರ್ಮಾನಿಸಲಾಯಿತು ಹಾಗು ಈ ತೀರ್ಮಾನದಂತೆ ಮೂವರು ಅಭ್ಯರ್ಥಿಗಳ ಹೆಸರನ್ನು ರಾಜ್ಯ ಸಮಿತಿಗೆ ಕಳುಹಿಸಲಾಯಿತು ಹಾಗೂ ಕಾರ್ಯಕರ್ತರನ್ನು ಭೂತ್ ಮಟ್ಟದಲ್ಲಿ ಕಾರ್ಯ ಪ್ರವೃತ್ತರಾಗಲು ಎಚ್ಚರಿಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಗ್ರಾಮಗಳ ಕಾರ್ಯಕರ್ತರು ಮತ್ತು ಪಕ್ಷದ ಬೆಂಬಲಿಗರು ಭಾಗವಹಿಸಿದ್ದರು.

ಈ ಸಂಧರ್ಭ ಮಾತನಾಡಿದ ಎಸ್.ಡಿ.ಪಿ.ಐ ಜಿಲ್ಲಾ ಸಮಿತಿ ಸದಸ್ಯ ಎ.ಕೆ ಅಶ್ರಫ್, ಬೆಳ್ತಂಗಡಿಯಲ್ಲಿ ಶಾಸಕ ವಸಂತ ಬಂಗೇರರು ಅಲ್ಪಸಂಖ್ಯಾತ ಸಮುದಾಯಕ್ಕೆ ಎಲ್ಲಾ ರೀತಿಯಲ್ಲೂ ಅನ್ಯಾಯವನ್ನೇ ಮಾಡುತ್ತಿದ್ದು, ಇದನ್ನು ನಿಲ್ಲಿಸಲು ಇಲ್ಲಿ ಎಸ್.ಡಿ.ಪಿ.ಐ ಸ್ಪರ್ಧೆ ಅನಿವಾರ್ಯವೆಂದರು. ಬಳಿಕ ಮಾತನಾಡಿದ ಎಸ್.ಡಿ.ಪಿ.ಐ ರಾಜ್ಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ, ಬೆಳ್ತಂಗಡಿಯಲ್ಲಿ ಶಾಸಕರ ಆಡಳಿತದಲ್ಲಿನ ವೈಫಲ್ಯತೆ ಮತ್ತು ಅಧಿಕಾರದಲ್ಲಿನ ತಾರತಮ್ಯ ನೀತಿಯನ್ನು ವಿವರಿಸಿ ತಾಲೂಕಿನ ಪ್ರಜ್ಞಾವಂತ ಮತದಾರರು ಜನತೆಯ ಪರವಾಗಿ ಕೆಲಸ ಮಾಡುವ ಎಸ್.ಡಿ.ಪಿ.ಐಯನ್ನು ಈ ಬಾರಿ ಬೆಳ್ತಂಗಡಿಯಲ್ಲಿ ಬೆಂಬಲಿಸಲಿದ್ದಾರೆಂದರು.

ರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಪಿ.ಐ ಬೆಳ್ತಂಗಡಿ ವಿಧಾನ ಸಭಾ ಅಧ್ಯಕ್ಷ ನವಾಝ್ ಶರೀಫ್ ವಹಿಸಿದ್ದರು ಈ ಸಂದರ್ಭದಲ್ಲಿ ಎಸ್.ಡಿ.ಟಿ.ಯು ರಾಜ್ಯಾಧ್ಯಕ್ಷ ಜಲೀಲ್ ಕೃಷ್ಣಾಪುರ, ಎಸ್ಡಿಪಿಐ ಜಿಲ್ಲಾ ಉಪಾಧ್ಯಕ್ಷ ಆ್ಯಂಟೊನಿ ಪಿ.ಡಿ, ಎಸ್.ಡಿ.ಪಿ.ಐ ವಿಧಾನ ಸಭಾ ಸಮಿತಿ ಸದಸ್ಯ ಅಕ್ಬರ್ ಬೆಳ್ತಂಗಡಿ, ಕಣಿಯೂರು ಗ್ರಾ.ಪಂ ಸದಸ್ಯ ಶುಕುರ್ ಕುಪ್ಪೆಟ್ಟಿ, ಕುವೆಟ್ಟು ಗ್ರಾ.ಪಂ ಸದಸ್ಯ ರಿಯಾಝ್ ಮದ್ದಡ್ಕ, ಎಸ್ಡಿಪಿಐ ಅಳದಂಗಡಿ ವಲಯಾಧ್ಯಕ್ಷ ಹಸನ್ ಕಟ್ಟೆ ಹಾಗೂ ಮತ್ತಿತರ ಭಾಗವಹಿಸಿದ್ದರು.

ಎಸ್ಡಿಪಿಐ ಬೆಳ್ತಂಗಡಿ ವಿಧಾನ ಸಭಾ ಉಪಾಧ್ಯಕ್ಷ ಫಝಲ್ ರಹಮಾನ್‌ ಕೋಯ ಸ್ವಾಗತಿಸಿದರು. ನಿಝಾಮ್ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿ, ಅಶ್ಫಕ್ ಪುಂಜಲ್ಕಟ್ಟೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News