ಕಟಪಾಡಿ ದರ್ಗಾ ಉರೂಸ್‌ಗೆ ಚಾಲನೆ
ಕಾಪು, ಎ.7: ಕಟಪಾಡಿ ಮಸೀದಿ ಸಮೀಪ ಅಂತ್ಯ ವಿಶ್ರಮಗೊಂಡಿರುವ ಅಶೈಕ್ ಫಖೀರ್ ಶಾಹ್ ವಲಿಯುಲ್ಲಾಹೀ (ಖ.ಸಿ) ರವರ ಉರೂಸ್ ಯಾನೆ ಝಿಯಾರತ್‌ಗೆ ಶುಕ್ರವಾರ ಚಾಲನೆ ನೀಡಲಾಯಿತು.
ಜುಮಾ ನಮಾಝಿನ ಬಳಿಕ ಮಸೀದಿ ಖತೀಬ್ ಹಾಜಿ ಕೆ.ಪಿ ಮುಹಮ್ಮದ್ ಬಶೀರ್ ಮದನಿ ದರ್ಗಾದಲ್ಲಿ ಸಾಮೂಹಿಕ ದುಆ ನೆರವೇರಿಸಿದರು. ಮಸೀದಿ ಅಧ್ಯಕ್ಷ ಕೆ. ಶಹಬಾನ್ ಧ್ವಜಾರೋಹಣ ನೆರವೇರಿಸಿದರು. ಇಶಾ ನಮಾಝಿನ ಬಳಿಕ ಕಾರವಾರದ ಖಾಝಿ ಮೌಲಾನಾ ಮುಫ್ತಿ ಇಶ್ತಿಯಾಕುಲ್ ಖಾದಿರಿ ಮಾತ ನಾಡಿದರು. ನಂತರ ಅಜಿಲಮೊಗೇರು ಸಯ್ಯಿದುಲ್ ಬಶರ್ ಬುರ್ದಾ ತಂಡದಿಂದ ಬುರ್ದಾ ಆಲಾಪಣೆ ನಡೆಯಿತು.
ಸರಕಾರಿ ಗುಡ್ಡೆ ಜಾಮೀಯಾ ಮಸೀದಿ ಖತೀಬ್ ಉಸ್ಮಾನ್ ಮದನಿ, ಮಣಿಪುರ ಮಸೀದಿ ಧರ್ಮಗುರು ಅಬ್ದುಲ್ ಅಜೀಝ್ ಮಿಸ್ಬಾಹಿ, ಕಟಪಾಡಿ ಹಿದಾಯತುಲ್ ಇಸ್ಲಾಂ ಮದ್ರಸದ ಮೌಲನಾ ಶಕೀಲ್ ಅಹ್ಮದ್ ಹಲೀಮಿ, ಮುಹಮ್ಮದ್ ರವೂಫ್ ಸಖಾಫಿ, ಅಶ್ರಫ್ ಸಅದಿ, ಅಬ್ದುರ್ರಶೀದ್ ಮುಸ್ಲಿಯಾರ್, ಅಬ್ದುಲ್ ಹಕೀಂ ಸಖಾಫಿ, ಅಬ್ದುರ್ರಹ್ಮಾನ್ ಜೌಹರಿ, ಮೌಲಾನಾ ತೌಫೀಖ್ ರಝ್ವಿ, ವೈ.ಎಂ.ಇಲ್ಯಾಸ್, ಮುಹಮ್ಮದ್ ಉಪಸ್ಥಿತರಿ ದ್ದರು.