ಉಡುಪಿ: ಎಸ್‌ಎಂಎ ಪ್ರತಿನಿಧಿ ಸಂಗಮ
ಉಡುಪಿ, ಎ.7: ಸುನ್ನೀ ಮೆನೇಜ್‌ಮೆಂಟ್ ಅಸೋಸಿಯೇಶನ್ ಉಡುಪಿ ಜಿಲ್ಲೆ ಇದರ ವತಿಯಿಂದ ಎಸ್‌ಎಂಎ ಪ್ರತಿನಿಧಿ ಸಂಗಮವು ಇತ್ತೀಚೆಗೆ ಅಜ್ಜರ ಕಾಡಿನಲ್ಲಿರುವ ಸಂಸ್ಥೆಯ ಕಾರ್ಯಾಲಯದಲ್ಲಿ ಜರಗಿತು.
ವಿಷಯ ಮಂಡಿಸಿದ ಹಿರಿಯ ನೇತಾರ ಜಿ.ಎಂ.ಮುಹಮ್ಮದ್ ಸಖಾಫಿ ಅಲ್ ಕಾಮಿಲ್ ಮಾತನಾಡಿ, ಶಿಕ್ಷಕರೊಂದಿಗೆ ಆಡಳಿತ ಮಂಡಳಿ ಸಂಪೂರ್ಣ ಸಹಕಾರ ನೀಡಿದೆ ಮಾತ್ರ ಶಿಕ್ಷಣದ ಯಶಸ್ವಿ ಸಾಧ್ಯ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಮುಹಮ್ಮದ್ ಮನ್ಸೂರು ಕೋಡಿ ವಹಿಸಿದ್ದರು. ಎಸ್‌ಜೆಎಂ ಜಿಲ್ಲಾಧ್ಯಕ್ಷ ಅಬ್ದುರ್ರಝಾಕ್ ಕಾಸಿಮಿ ಸಭೆಯನ್ನು ಉದ್ಘಾಟಿಸಿದರು. ಹಾಜಿ ಅಬೂಬಕ್ಕರ್ ಮುಸ್ಲಿಯಾರ್ ಎಸ್.ಎಸ್.ರೋಡ್ ದುವಾ ನೆರವೇರಿಸಿದರು. ಎಸ್‌ಎಂಎ ರಾಜ್ಯ ಉಪಾಧ್ಯಕ್ಷ ಮೊದಿನ್ ಹಾಜಿ ಗುಡ್‌ವಿಲ್, ಎಸ್‌ಜೆಎಂ ಜಿಲ್ಲಾಧ್ಯಕ್ಷ ಅಬ್ದುರ್ರಝಾಕ್ ಕಾಸಿಮಿ, ಕನ್ನಂಗಾರ್ ವಲಯ ಅಧ್ಯಕ್ಷ ಬಾವಾ ಹಾಜಿ, ಕುಂದಾಪುರ ವಲಯ ಅಧ್ಯಕ್ಷ ಹಂಝ ಹಳವಳ್ಳಿ ಉಪಸ್ಥಿತರಿದ್ದರು.
ಎಸ್‌ಎಂಎ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಕೆ.ಅಬ್ದುರ್ರಶೀದ್ ಸಖಾಫಿ ಮಜೂರು ಸ್ವಾಗತಿಸಿದರು. ಎಸ್‌ಜೆಎಂ ಕಾರ್ಯದರ್ಶಿ ಇಬ್ರಾಹಿಂ ನಯೀಮಿ ವಂದಿಸಿದರು.