ತಂತ್ರಾಂಶ ಅಳವಡಿಕೆ: ಅಂಚೆ ಕಚೇರಿ ವ್ಯವಹಾರ ಇಲ್ಲ
Update: 2018-04-07 20:21 IST
ಉಡುಪಿ, ಎ.7: ಉಡುಪಿ ವಿಭಾಗದ ಎಲ್ಲಾ ಅಂಚೆ ಕಚೇರಿಗಳಲ್ಲಿ ಎ.17 ರಿಂದ ಸಿಎಸ್‌ಐ ತಂತ್ರಾಂಶ ಅಳವಡಿಕೆ ಆಗಲಿರುವುದರಿಂದ, ಎ.12, 13 ಮತ್ತು 16ರಂದು ಶಾಖಾ ಅಂಚೆ ಕಚೇರಿಗಳಲ್ಲಿ, ಎ.13 ಮತ್ತು 16ರಂದು ಉಪ ಅಂಚೆ ಕಚೇರಿಗಳಲ್ಲಿ ಹಾಗೂ ಎ.16ರಂದು ಪ್ರಧಾನ ಅಂಚೆ ಕಚೇರಿಗಳಲ್ಲಿ ಯಾವುದೇ ರೀತಿಯ ವ್ಯವಹಾರಗಳು ನಡೆಯುವುದಿಲ್ಲ ಎಂದು ಉಡುಪಿ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭ ಅಂಚೆ ಗ್ರಾಹಕರು ಹಾಗೂ ಸಾರ್ವಜನಿಕರು ಇಲಾಖೆಯೊಂದಿಗೆ ಸಹರಿಸುವಂತೆ ಅವರು ವಿನಂತಿಸಿದ್ದಾರೆ.