×
Ad

ಬ್ರಹ್ಮಾವರ: ಲಿಟ್ಲ್‌ರಾಕ್‌ನ ನೂತನ ಕಟ್ಟಡ ಉದ್ಘಾಟನೆ

Update: 2018-04-07 20:23 IST

ಬ್ರಹ್ಮಾವರ, ಎ.7: ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲ್‌ನ ಸಂಸ್ಥಾಪಕ ಡಾ. ಸಿ.ಟಿ.ಅಬ್ರಹಾಂ ಅವರ ಸವಿನೆನಪಿಗಾಗಿ ನಿರ್ಮಿಸಿದ ನೂತನ ಕಟ್ಟಡವನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು.

ಫೌಂಡರ್ ಮೆಮೋರಿಯಲ್ ಅಕಾಡೆಮಿ ಎನ್ನುವ ಈ ಹೊಸ ಕಟ್ಟಡದಲ್ಲಿ ಪ್ರೌಢಶಾಲಾ ತರಗತಿಗಳನ್ನೊಳಗೊಂಡಂತೆ ವಾಚನಾಲಯ, ಮಾಹಿತಿ ತಂತ್ರಜ್ಞಾನ ಕೇಂದ್ರ, ದೃಶ್ಯ-ಶ್ರವಣ ತರಗತಿಗಳು, ಭಾರತ ಸರಕಾರದಿಂದ ಪ್ರಾಯೋಜಿಸಲ್ಪಟ್ಟ ಅಟಲ್ ಟಿಂಕರಿಂಗ್ ಲ್ಯಾಬ್, ಒಳಾಂಗಣ ಕ್ರೀಡಾ ಹಾಲ್‌ಗಳನ್ನೊಳಗೊಂಡಂತೆ ವಿಸ್ತ್ರತ ವ್ಯವಸ್ಥೆಯನ್ನು ಮಾಡಲಾಗಿದೆ. 1230 ಆಸನಗಳನ್ನೊಳಗೊಂಡ ಕಲಾತ್ಮಕತೆ ಯಿಂದ ಕೂಡಿದ, ಎಲ್ಲರ ಕಣ್ಮನ ಸೆಳೆಯುವ, ವಿಶಾಲ ಆಕರ್ಷಣೀು ಸಭಾಂಗಣ ಸಹ ಈ ಕಟ್ಟಡದಲ್ಲಿದೆ.

ರಾಜ್ಯ ಮೀನುಗಾರಿಕೆ, ಕ್ರೀಡಾ ಹಾಗೂ ಯುವ ಸಬಲೀಕರಣ ಇಲಾಖೆ ಸಚಿವ ಪ್ರಮೋದ್ ಮಧ್ವರಾಜ್ ಕಟ್ಟಡವನ್ನು ಉದ್ಘಾಟಿಸಿದರು. ಈ ಸಂದರ್ಭ ದಲ್ಲಿ ಸಚಿವರು ಶಾಲಾ ಸಂಸ್ಥಾಪಕ ದಿ.ಡಾ.ಸಿ.ಟಿ. ಅಬ್ರಹಾಂರ ಸೇವೆಯನ್ನು ಕೊಂಡಾಡಿ, ಶಾಲೆಯು ಶಿಕ್ಷಣ ಗುಣಮಟ್ಟದಲ್ಲಿ ಉತ್ಕೃಷ್ಟತೆಯನ್ನು ಕಾಯ್ದು ಕೊಂಡಿರುವುದನ್ನು ಪ್ರಶಂಸಿಸಿದರು. ಜಿಲ್ಲೆಯ ಅತ್ಯುತ್ತಮ ಸಭಾಂಗಣವನ್ನು ನಿರ್ಮಿಸಿದ್ದಕ್ಕಾಗಿ ಸಚಿವರು ಶಾಲಾ ಆಡಳಿತವನ್ನು ಪ್ರಶಂಸಿಸಿದರು.

ಡಾ.ರಾಯ್ ಫಿಲಿಪ್ ದೇವರ ಸ್ಮರಣೆ ಮಾಡಿ ಕಟ್ಟಡವನ್ನು ಸಮರ್ಪಿಸಿದರು. ಡಾ.ಜಯಗೌರಿ ಹಡಿಗಲ್, ಡಾ.ಸಿಟಿ.ಅಬ್ರಹಾಂ ಅವರೊಂದಿಗಿನ ತಮ್ಮ 30 ವರ್ಗಳ ಒಡನಾಟವನ್ನು ಸ್ಮರಿಸಿದರು.

ಶಾಲಾ ನಿರ್ದೇಶಕ ಪ್ರೊ. ಮ್ಯಾಥ್ಯೂ ಸಿ. ನೈನಾನ್ ಸ್ವಾಗತಿಸಿ, ಶಾಲಾ ಪ್ರಾಂಶುಪಾಲ ಡಾ. ಜಾನ್ ಥಾಮಸ್ ವಂದಿಸಿದರು. ಅಧ್ಯಾಪಕಿ ಬಿಂದು ಜೋಸ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News