ಕಲ್ಲಡ್ಕ ಪ್ರಭಾಕರ ಭಟ್‌ನ್ನು ಜಿಲ್ಲೆಯಿಂದಲೇ ಗಡಿಪಾರು ಮಾಡಿ: ರಿಯಾಝ್ ಫರಂಗಿಪೇಟೆ
Update: 2018-04-07 22:39 IST
ಬಂಟ್ವಾಳ, ಎ. 7: ಬಂಟ್ವಾಳ ಶಾಂತಿ ಸುವ್ಯವಸ್ಥೆಯನ್ನು ಹದಗೆಡಿಸುವ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್‌ನನ್ನು ಚುನಾವಣೆ ಮುಗಿಯುವವರೆಗೆ ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಎಸ್ ಡಿಪಿಐ ಬಂಟ್ವಾಳ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಒತ್ತಾಯಿಸಿದ್ದಾರೆ.
ಶಾಂತಿಯುತವಾಗಿರುವ ಜಿಲ್ಲೆಯನ್ನು ಚುನಾವಣಾ ಸಂದರ್ಭದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ದ್ವೇಷ ಕಾರುವ ಭಾಷಣ ಮಾಡಿ ಕೆರಳಿಸುತ್ತಿರುವುದು ಖಂಡನೀಯ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮತೀಯ ಭಾಷಣವನ್ನು ಮಾಡಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದರಲ್ಲದೆ ಕೋಮು ಪ್ರಚೋದನಕಾರಿ ಭಾಷಣವನ್ನು ಮಾಡಿದ್ದಾರೆ. ಧರ್ಮಗಳ ಮಧ್ಯೆ ಕೋಮು ಸಾಮರಸ್ಯವನ್ನು ಕೆಡಿಸಿ ಚುನಾವಣಾ ಲಾಭ ಪಡೆಯುವುದೇ ಇದರ ಹಿಂದಿನ ಮುಖ್ಯ ಉದ್ದೇಶ ಎಂದು ಅವರು ಆರೋಪಿಸಿದ್ದಾರೆ.
ಚುನಾವಣಾ ಆಯೋಗವು ಶೀಘ್ರ ಇವರ ವಿರುದ್ಧ ಕ್ರಮ ಕೈಗೊಂಡು ಜಿಲ್ಲೆಯಿಂದಲೇ ಗಡಿಪಾರು ಮಾಡಬೇಕೆಂದು ಎಸ್‌ಡಿಪಿಐ ಬಂಟ್ವಾಳ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.