×
Ad

​ಉಲಮಾಗಳ ಒಕ್ಕೂಟವೇ ಸಮಸ್ತ: ಸೈಯದ್ ಝೈನುಲ್ ಆಬಿದೀನ್ ತಂಙಳ್

Update: 2018-04-07 23:15 IST

ಮಂಗಳೂರು, ಎ. 7: ಸಮಸ್ತ ಉಲಮಾಗಳ ಒಕ್ಕೂಟವಾಗಿದ್ದು, ಸುನ್ನತ್ ಆಶಯಗಳ ತಳಹದಿಯಲ್ಲಿ ಮುನ್ನಡೆಯುತ್ತಿರುವ ಸಂಘಟನೆಯಾಗಿದೆ ಎಂದು ಜಂ ಇಯ್ಯತುಲ್ ಉಲಮಾ ಕರ್ನಾಟಕದ ಅಧ್ಯಕ್ಷ ಸೈಯದ್ ಝೈನುಲ್ ಆಬಿದೀನ್ ತಂಙಳ್ ಕುನ್ನಂಗೈ ಹೇಳಿದ್ದಾರೆ.

ಎಸ್ಕೆಎಸೆಸೆಫ್ ಉಳ್ಳಾಲ ವತಿಯಿಂದ ಉಳ್ಳಾಲದ ಸಯ್ಯಿದ್ ಮದನಿ ನಗರದ ಶಂಸುಲ್ ಉಲಮಾ ವೇದಿಕೆಯಲ್ಲಿ ಶನಿವಾರ ಸಂಜೆ ನಡೆದ ಸಮಸ್ತ ಮಹಾ ಸಮ್ಮೇಳನ ಸಮಾರೋಪದಲ್ಲಿ ಅವರು ಮಾತನಾಡಿದರು.

ಶಂಸುಲ್ ಉಲಮಾ ಅವರ ನೇತೃತ್ವದ ಸಮಸ್ತ ಸಂಘಟನೆ ಹಾಗೂ ಉಳ್ಳಾಲಕ್ಕೆ ಅವಿನಾಭಾವ ಸಂಬಂಧ ಇದೆ. ಹಲವು ಉಲಮಾಗಳ ಈ ಸಂಘಟನೆಯು ಸುನ್ನತ್ ತತ್ವಾದರ್ಶದಲ್ಲಿ ಮುನ್ನಡೆಯುತ್ತಿದೆ ಎಂದರು. ದ.ಕ. ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು.

ಕೋಟೆಕಾರು ಮಖ್ದೂಮಿಯಾ ಶರೀಅತ್ ಕಾಲೇಜಿನ ಪ್ರಾಂಶುಪಾಲ ಹಾರೂನ್ ಅಹ್ಸನಿ, ಮೂಡಿಗೆರೆ ಖಾಝಿ ಎಂ.ಎ.ಖಾಸಿಂ ಉಸ್ತಾದ್, ಆತ್ರಾಡಿ ಖಾಝಿ ವಿ.ಎ.ಅಬೂಬಕರ್ ಮುಸ್ಲಿಯಾರ್, ಪಾತೂರ್ ಉಸ್ತಾದ್, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್, ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕಣಚೂರ್ ಮೋನು ಹಾಜಿ, ಜೆಮ್ಶಾಡ್ ದಾರುಲ್ ಹುದಾ ಇಸ್ಲಾಮಿಕ್ ಯುನಿವರ್ಸಿಟಿಯ ಉಪಕುಲಪತಿ ಬಹಾವುದ್ದೀನ್ ನದ್ವಿ ಕೂರಿಯೂಡ್, ಎಸ್ಕೆಎಸೆಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ಜಿಲ್ಲಾಧ್ಯಕ್ಷ ಖಾಸಿಂ ದಾರಿಮಿ ಕಿನ್ಯ, ನೂರುಲ್ ಹುದಾ ಮಾಡನ್ನೂರು ಇದರ ಪ್ರಾಂಶುಪಾಲ ಅಡ್ವಕೇಟ್ ಹನೀಫ್ ಹುದವಿ, ಹುಸೈನ್ ಆಲವಿ ತಂಙಳ್ ಕುಕ್ಕಾಜೆ, ಜುನೈದ್ ತಂಙಳ್ ಆತೂರು, ಅನಸ್ ತಂಙಳ್ ಅಲ್ ಹಾದಿ ಹಂಡಿಬಾಗಿಲು, ಶರ್ಫುದ್ದೀನ್ ತಂಙಳ್ ಅಲ್ ಹಾದಿ ಸಾಲ್ಮರ, ಹಬೀಬುರ್ರಹ್ಮಾನ್ ತಂಙಳ್ ಅಲ್‌ಬುಖಾರಿ ಸೂರಿಂಜೆ, ಇಬ್ರಾಹೀಂ ತಂಙಳ್ ಉಳ್ಳಾಲ, ಉಪ್ಪಿನಂಗಡಿ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ, ಜಂ ಇಯ್ಯತುಲ್ ಉಲಮಾ ಕರ್ನಾಟಕ ಇದರ ಸದಸ್ಯ ಇಬ್ರಾಹೀಂ ಬಾಖವಿ ಕೆ.ಸಿ.ರೋಡ್, ಪುತ್ತೂರು ಕೇಂದ್ರ ಜುಮಾ ಮಸೀದಿಯ ಖತೀಬ್ ಎಸ್.ಬಿ.ಮುಹಮ್ಮದ್ ದಾರಿಮಿ, ಕೆ.ಆರ್.ಹುಸೈನ್ ದಾರಿಮಿ ರೆಂಜಲಾಡಿ, ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಜಂ ಇಯ್ಯತುಲ್ ಉಲಮಾ ಕರ್ನಾಟಕ ಇದರ ಕಾರ್ಯದರ್ಶಿ ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಸಮಸ್ತ ವಿದ್ಯಾಭ್ಯಾಸ ಬೋರ್ಡ್‌ನ ಸದಸ್ಯ ಚಕಮಕಿ ಅಬ್ಬಾಸ್ ಹಾಜಿ, ಪುತ್ತೂರು ಸಂಯುಕ್ತ ಜಮಾಅತ್‌ನ ಅಧ್ಯಕ್ಷ ಹಾಜಿ ಇಬ್ರಾಹೀಂ ಕೆಮ್ಮಾಡಿ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಮೆಟ್ರೋ ಸಾಹುಲ್ ಹಮೀದ್ ಹಾಜಿ ಗುರುಪುರ, ಸದಸ್ಯ ಹಾಜಿ ಯು.ಎಸ್. ಅಬೂಬಕರ್ ಉಳ್ಳಾಲ, ಉಳ್ಳಾಲ ದರ್ಗಾ ಸಮಿತಿಯ ಕೋಶಾಧಿಕಾರಿ ಯು.ಕೆ.ಇಲ್ಯಾಸ್ ಪೇಟೆ, ಸಮಿತಿಯ ಜೊತೆ ಕಾರ್ಯದರ್ಶಿ ಮುಹಮ್ಮದ್ ನೌಶದ್ ಅಲಿ ಮೇಲಂಗಡಿ, ಸಮಿತಿಯ ಲೆಕ್ಕಪರಿಶೋಧಕ ಯು.ಟಿ.ಇಲ್ಯಾಸ್ ತೋಟ, ಮದ್ರಸ ಮ್ಯಾನೇಜ್‌ಮೆಂಟ್‌ನ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಫೀಕ್ ಕೊಡಾಜೆ, ಜಂಇಯ್ಯತುಲ್ ಮುಅಲ್ಲಿಮೀನ್ ದ.ಕ. ಜಿಲ್ಲಾ ಕೋಶಾಧಿಕಾರಿ ಲತೀಫ್ ದಾರಿಮಿ ದೇರಳಕಟ್ಟೆ, ಅಬ್ದುರ್ರಹ್ಮಾನ್ ದಾರಿಮಿ ತಬೂಕ್ ದೇರಳಕಟ್ಟೆ, ಇಬ್ರಾಹೀಂ ಖಲೀಲ್ ಅಂಜದಿ ಸಾಲೆತ್ತೂರು, ನೌಶಾದ್ ಹಾಜಿ ಸೂರಲ್ಪಾಡಿ, ಎಲ್.ಟಿ.ಅಬ್ದುರ್ರಝಾಕ್ ಹಾಜಿ, ಸಯ್ಯದ್ ಅಲಿ, ಇಬ್ರಾಹೀಂ ಕೊಣಾಜೆ, ಮುಹಮ್ಮದ್ ಹಾಫಿಲ್ ನಈಮಿ, ನಝೀರ್ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.

ಸ್ವಾಗತ ಸಮಿತಿಯ ಕನ್ವೀನರ್ ಹಾಫಿಲ್ ಝೈನ್ ಸಖಾಫಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳಗ್ಗೆ 9:30ರಿಂದ ಮುಅಲ್ಲಿಂಗಳ ಸಮಾವೇಶ ನಡೆದರೆ, 11:30ರ ಬಳಿಕ ಫೈಝೀಸ್ ಸಂಗಮ ನಡೆಯಿತು. ಮಧ್ಯಾಹ್ನ 2 ಗಂಟೆಯಿಂದ ತ್ವಲಬ-ಇಬಾದ್ ಕಾನ್ಫರೆನ್ಸ್ ನಡೆದರೆ, ಸಂಜೆ 5:30ರ ಬಳಿಕ ಸಮಾರೋಪ ಕಾರ್ಯಕ್ರಮಗಳು ಆರಂಭಗೊಂಡು ರಾತ್ರಿಯವರೆಗೆ ಮುಂದುವರಿಯಿತು.

ಎಸ್ಕೆಎಸೆಸೆಫ್‌ನ ವಿವಿಧ ಶಾಖೆ ಹಾಗೂ ಕ್ಲಸ್ಟರ್‌ನ ಕಾರ್ಯಕರ್ತರು ವಲಯ ಸಮಿತಿಯಡಿ ಜಮಾವಣೆಗೊಂಡು ವಾಹನ ರ್ಯಾಲಿಯ ಮೂಲಕ ಮಹಾ ಸಮ್ಮೇಳನ ಮೈದಾನಕ್ಕೆ ಆಗಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News