ಚೆನ್ನೈಯಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದ ಬಗ್ಗೆ ರಜಿನಿಕಾಂತ್ ಹೇಳಿದ್ದೇನು?

Update: 2018-04-08 10:07 GMT

ಚೆನ್ನೈ, ಎ.8: ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪನೆ ವಿಚಾರದಲ್ಲಿ ನಟ ಕಮಲ್ ಹಾಸನ್ ಹಾಗು ರಜಿನಿಕಾಂತ್ ನೇತೃತ್ವದಲ್ಲಿ ತಮಿಳು ಚಿತ್ರರಂಗದ ಕಲಾವಿದರು ಪ್ರತಿಭಟನೆ ನಡೆಸಿದ್ದಾರೆ,

ಈ ಸಂದರ್ಭ ಮಾತನಾಡಿದ ನಟ ರಜಿನಿಕಾಂತ್, ಕಾವೇರಿ ವಿವಾದದ ಬಗ್ಗೆ ರಾಜ್ಯದ ಜನರು ಪ್ರತಿಭಟನೆ ನಡೆಸುತ್ತಿರುವ ಸಂದರ್ಭ ನಗರದಲ್ಲಿ ಐಪಿಎಲ್ ಪಂದ್ಯವನ್ನು ಆಯೋಜಿಸಿರುವುದು ‘ಮುಜುಗರದ ವಿಷಯ’. ಅಷ್ಟೇ ಅಲ್ಲದೆ ಕಾವೇರಿ ನಿರ್ವಹಣಾ ಮಂಡಳಿ ರಚಿಸಲು ವಿಫಲವಾದ ಕೇಂದ್ರವನ್ನು ವಿರೋಧಿಸಲು ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ಪ್ರತಿಭಟನೆಯ ಸಂಕೇತವಾಗಿ ಕಪ್ಪು ಪಟ್ಟಿ ಧರಿಸಬೇಕು ಎಂದರು.

"ಕಾವೇರಿ ನಿರ್ವಹಣಾ ಮಂಡಳಿಯನ್ನು ಸ್ಥಾಪಿಸದಿದ್ದರೆ ಕೇಂದ್ರ ಸರಕಾರವು ತಮಿಳುನಾಡಿನ ಜನರ ಕೋಪಕ್ಕೆ ಗುರಿಯಾಗಲಿದೆ. ನಗರದಲ್ಲಿ ಐಪಿಎಲ್ ಪಂದ್ಯಗಳು ರದ್ದಾಗದಿದ್ದರೆ ಕನಿಷ್ಟ ಪಕ್ಷ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ಕಪ್ಪು ಪಟ್ಟಿಯನ್ನು ಧರಿಸಬೇಕು" ಎಂದರು. 

ಪ್ರತಿಭಟನೆಯಲ್ಲಿ ಪ್ರಸಿದ್ಧ ತಮಿಳು ನಟರಾದ ವಿಜಯ್, ಸೂರ್ಯ, ಧನುಷ್, ಸತ್ಯರಾಜ್, ಶಿವಕುಮಾರ್, ನಾಸರ್, ವಿಶಾಲ್, ಕಾರ್ತಿ, ಶಿವ ಕಾರ್ತಿಕೇಯನ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News