ದ.ಕ. ಜಿಲ್ಲೆಯಾದ್ಯಂತ ತಂಪೆರೆದ ಮಳೆರಾಯ
Update: 2018-04-08 17:26 IST
ಮಂಗಳೂರು, ಎ. 8: ದ.ಕ.ಜಿಲ್ಲೆಯ ವಿವಿಧ ಕಡೆ ರವಿವಾರ ಸಂಜೆ ಅಕಾಲಿಕ ಮಳೆ ಸುರಿದಿದೆ. ಗುಡುಗು ಸಹಿತ ಅಕಾಲಿಕ ಮಳೆ ಸುರಿಯಿತು.
ಆಲಿಕಲ್ಲು ಮಳೆ: ಕೊಣಾಜೆ ಸಮೀಪದ ಪಾವೂರು-ಮಲಾರ್ ಆಸುಪಾಸು, ಬಂಟ್ವಾಳದ ಕಡೇಶಿವಾಲಯ ಗ್ರಾಮದ ಪೆರ್ಲಾಪು ನಿವಾಸಿ ಸುನಂದ ಎಂಬವರ ಮನೆಯ ಹಿಂಭಾಗದಲ್ಲಿ ಆಲಿಕಲ್ಲು ಮಳೆಯಾದ ಬಗ್ಗೆ ವರದಿಯಾಗಿದೆ.
ಕುತ್ತಾರ್-ದೇರಳಕಟ್ಟೆ ರಸ್ತೆ ಬಂದ್: ಕುತ್ತಾರ್-ದೇರಳಕಟ್ಟೆ ನಡುವಿನ ಕೆ.ಎಸ್. ಹೆಗ್ಡೆ ಆಸ್ಪತ್ರೆ ಎದುರಿನ ರಸ್ತೆ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗುತ್ತಿದ್ದು, ರಸ್ತೆಗೆ ಮಣ್ಣು ತುಂಬಿಸಿ ಎತ್ತರಿಸಿದ ಕಾರಣ ಅಕಾಲಿಕ ಮಳೆಗೆ ರಸ್ತೆ ಕೆಸರುಮಯವಾಗಿ ಸಂಚಾರಕ್ಕೆ ತೊಂದರೆಯಾಯಿತು. ಬಸ್ ಸಹಿತ ಹಲವು ವಾಹನಗಳು ಕೆಸರು ತುಂಬಿದ ರಸ್ತೆಯಲ್ಲಿ ಬಾಕಿಯಾದ ಕಾರಣ ಬಸ್ ಸಹಿತ ಇತರ ವಾಹನಗಳು ಮಾರ್ಗ ಬದಲಿಸಬೇಕಾಯಿತು. ಕೆಲವು ವಾಹನಗಳು ಕೋಟೆಕಾರು- ಬೀರಿ ಹಾಗೂ ಕುತ್ತಾರ್ - ಮದಕ ಮಾರ್ಗವಾಗಿ ಸಂಚರಿಸಿದೆ.