×
Ad

ಪಾಂಡವರಕಲ್ಲು: ಎಸ್ ಡಿ ಪಿ ಐ ಯಿಂದ ಕಾರ್ಯಕರ್ತರ ಸಭೆ

Update: 2018-04-08 17:52 IST

ಬೆಳ್ತಂಗಡಿ, ಎ. 8: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಡಗ ಕಜೆಕಾರು ಗ್ರಾಮ ಸಮಿತಿ ವತಿಯಿಂದ ಚುನಾವಣಾ ಪೂರ್ವ ತಯಾರಿಯ ಭಾಗವಾಗಿ ಕಾರ್ಯಕರ್ತರ ಸಭೆ ಪಾಂಡವರಕಲ್ಲಿನ ಕೊಮಿನಡ್ಕದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಅಥಾವುಲ್ಲಾ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ  ಆಗಮಿಸಿದ್ದ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ  ರಿಯಾಝ್ ಫರಂಗಿಪೇಟೆ ಮಾತನಾಡಿ 'ಬಂಟ್ವಾಳದ ಜನತೆ
35 ವರ್ಷಗಳ ಗುಲಾಮಗಿರಿಯ ಬದುಕಿನಿಂದ ಹೊರ ಬರಲು ಈ ಸಲದ ಚುನಾವಣೆ ಸಕಾಲವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿಯ ದಬ್ಬಾಳಿಕೆಯ ರಾಜಕೀಯದಿಂದ ಜನತೆಯನ್ನು ಸ್ವತಂತ್ರಗೊಳಿಸುವುದೇ ಎಸ್ಡಿಪಿಐಯ ಮುಖ್ಯ ಉದ್ದೇಶ ಎಂದು ಅವರು ಅಭಿಪ್ರಾಯಪಟ್ಟರು.

ಈ ನಿಟ್ಟಿನಲ್ಲಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತ ಯಾಚನೆ ಮಾಡಲು ಮತ್ತು ಪ್ರಚಾರ ಕಾರ್ಯ ಚಟುವಟಿಕೆಗಾಗಿ ಬೂತ್ ಮಟ್ಟದ ತಂಡಗಳನ್ನು ರಚಿಸಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಎಸ್ ಡಿ ಪಿ ಐ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾದ ಸಾಹುಲ್ ಹಮೀದ್ ಹಾಗು ಮುಖಂಡರಾದ ಅಕ್ಬರಲಿ ತಲಪಾಡಿ ಅತಿಥಿ ಮಾತನಾಡಿದರು.

ಸಂದರ್ಭದಲ್ಲಿ ಪಿ ಎಫ್ ಐ ಮುಖಂಡ ಸಾದಿಕ್, ಎಸ್ ಡಿ ಪಿ ಐ ಬಡಗ ಕಜೆಕಾರು ಗ್ರಾಮ ಸಮಿತಿ ಉಪಾಧ್ಯಕ್ಷರಾದ ಹಂಝ ಪಾಂಡವರಕಲ್ಲು ಉಪಸ್ಥಿತರಿದ್ದರು. ಶಾಕಿರ್ ಪಾಂಡವರಕಲ್ಲು ಕಾರ್ಯಕ್ರಮ ವನ್ನು ನಿರೂಪನೆಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News