ಕಾಪು: ಮಿಂಚಿನ ನೋಂದಣಿ ಕಾರ್ಯಕ್ರಮ
Update: 2018-04-08 17:59 IST
ಕಾಪು, ಎ. 8: ಮತದಾರರ ಪಟ್ಟಿಗೆ ಹೆಸರು ಸೇರಿಸಲು ರವಿವಾರ ಕೈಗೊಂಡ ಮಿಂಚಿನ ನೋಂದಣಿ ಅಭಿಯಾನಕ್ಕೆ ಕಾಪು, ಪಡುಬಿದ್ರೆ ಪರಿಸರದ ಮತಗಟ್ಟೆ ಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಹೊಸ ಮತದಾರರ ಸೇರ್ಪಡೆ ಹಾಗೂ ಪಟ್ಟಿಯಲ್ಲಿ ತಿದ್ದುಪಡಿ ಸರಿ ಮಾಡಲು ಜನ ಮತಗಟ್ಟೆಗಳಿಗೆ ಆಗಮಿಸಿದರು. ಸಂಜೆ 5ರ ತನಕ ಈ ಪ್ರಕ್ರಿಯೆ ಚಾಲನೆಯಲ್ಲಿತ್ತು. ಹೆಚ್ಚಿನ ಮಂದಿ ತಮ್ಮ ಹೆಸರುಗಳನ್ನು ಮತದಾರ ಪಟ್ಟಿಗೆ ಸೇರಿಸಿದರು ಎಂದು ಅಧಿಕಾರಿ ಸುನಿತಾ ಹೇಳಿದರು.
ಪಡುಬಿದ್ರೆ ಬೋರ್ಡ್ ಶಾಲಾ ಮತಗಟ್ಟೆಯಲ್ಲಿ ಅರ್ಧ ಘಂಟೆ ವಿಳಂಬವಾಗಿ ತೆರೆಯಲಾಗಿತ್ತು. ಈ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.