×
Ad

ಉಡುಪಿ: ‘ಮಿಂಚಿನ ನೊಂದಣಿ’ಯಲ್ಲಿ 11,017 ಅರ್ಜಿಗಳ ಸ್ವೀಕಾರ

Update: 2018-04-08 22:00 IST

ಉಡುಪಿ, ಎ.8: ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅರ್ಹರಿರುವ ಮತದಾರರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು ಇಂದು ಜಿಲ್ಲೆಯ ಎಲ್ಲಾ ಸಾವಿರಕ್ಕೂ ಅಧಿಕ ಮತಗಟ್ಟೆಗಳಲ್ಲಿ ನಡೆದ ‘ಮಿಂಚಿನ ನೋಂದಣಿ’ ಕಾರ್ಯಕ್ರಮದಲ್ಲಿ ಜಿಲ್ಲೆಯಿಂದ ಒಟ್ಟು 11,017 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಇಂದು ಫಾರ್ಮ್ ನಂ.6ರಲ್ಲಿ 7203 ಅರ್ಜಿಗಳು, ಫಾರ್ಮ್ ನಂ.7ರಲ್ಲಿ 1740 ಅರ್ಜಿಗಳು, ಫಾರ್ಮ್ ನಂ.8ರಲ್ಲಿ 1921 ಅರ್ಜಿಗಳು ಹಾಗೂ ಫಾರ್ಮ್ ನಂ.8ಎಯಲ್ಲಿ 153 ಅರ್ಜಿಗಳನ್ನು ಸ್ವೀಕರಿಸಲಾಗಿದೆ.

ಬೈಂದೂರು ಕ್ಷೇತ್ರದಲ್ಲಿ 2509 ಅರ್ಜಿ, ಕುಂದಾಪುರದಲ್ಲಿ 2092 ಅರ್ಜಿ, ಉಡುಪಿಯಲ್ಲಿ 2550 ಅರ್ಜಿ, ಕಾಪುವಿನಲ್ಲಿ 2106 ಅರ್ಜಿ ಹಾಗೂ ಕಾರ್ಕಳ ಕ್ಷೇತ್ರದಲ್ಲಿ 1760 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಪರಿಶೀಲನೆಯ ಬಳಿಕ ಇವುಗಳಲ್ಲಿ ಅರ್ಹ ಹಾಗೂ ಎಲ್ಲಾ ದಾಖಲೆಗಳಿರುವ ಹೆಸರುಗಳನ್ನು ಮತಪಟ್ಟಿಗೆ ಸೇರ್ಪಡೆ ಗೊಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News