×
Ad

‘ಎಸ್.ಡಿ.ಬರ್ಮನ್ ಸಂಗೀತ ಪ್ರಪಂಚ’ ಕೃತಿ ಬಿಡುಗಡೆ

Update: 2018-04-08 22:01 IST

ಉಡುಪಿ, ಎ.8: ಅದಮಾರು ಶ್ರೀಪತಿ ಆಚಾರ್ಯ ಕನ್ನಡಕ್ಕೆ ಅನುವಾದಿಸಿ ರುವ ‘ಎಸ್.ಡಿ. ಬರ್ಮನ್ ಸಂಗೀತ ಪ್ರಪಂಚ’ (ಬಂಗಾಳಿ ಮೂಲ: ಖಗೇಶ್ ದೇವ್ ಬರ್ಮನ್‌ರ ‘ಸಚಿನ್ ಕರ್ತಾರ್ ಗಾನೇರ್ ಭುಬನ್’) ಕೃತಿ ಅನಾವರಣ ಸಮಾರಂಭ ಉಡುಪಿಯ ಸುಹಾಸಂ ವತಿಯಿಂದ ಹೊಟೇಲ್ ಕಿದಿಯೂರಿನ ಮಹಾಜನ್ ಹಾಲ್‌ನಲ್ಲಿ ರವಿವಾರ ಸಂಜೆ ನಡೆಯಿತು.

ಮಾಹೆಯ ಪ್ರಾದೇಶಿಕ ಜನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕ ಪ್ರೊ. ವರದೇಶ ಹಿರೇಗಂಗೆ ಅವರು ‘ಎಸ್.ಡಿ.ಬರ್ಮನ್ ಸಂಗೀತ ಪ್ರಪಂಚ’ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಮಣಿಪಾಲ ಎಂಐಟಿಯ ಹಿರಿಯ ಪ್ರಾಧ್ಯಾಪಕ ಪ್ರೊ. ಕೆ. ಫಣಿರಾಜ್ ಅವರು ಪುಸ್ತಕದ ಪರಿಚಯ ಮಾಡಿದರು.

ಹಿರಿಯ ವಿಮರ್ಶಕ, ಚಿಂತಕ ಜಿ.ರಾಜಶೇಖರ್ ಶುಭಾಶಂಸನೆಗೈದರು. ಹಾಸ್ಯ ಸಾಹಿತಿ ಕು.ಗೋ. ಉಪಸ್ಥಿತರಿದ್ದರು. ಸುಹಾಸಂ ಅಧ್ಯಕ್ಷ ಎಚ್. ಶಾಂತರಾಜ್ ಐತಾಳ್ ಸ್ವಾಗತಿಸಿದರು. ಶ್ರೀನಿವಾಸ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News