ಕ್ಷುಲ್ಲಕ ವಿಚಾರ: ಮನೆಗೆ ನುಗ್ಗಿದ ತಂಡದಿಂದ ದಂಪತಿಗೆ ಹಲ್ಲೆ
Update: 2018-04-08 22:19 IST
ಬಂಟ್ವಾಳ, ಎ. 8: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಇಬ್ಬರು ಯುವಕರು ಮನೆಯೊಂದರ ಆವರಣಕ್ಕೆ ಬಂದು ಮಾಲಕ ಹಾಗೂ ಅವರ ಪತ್ನಿ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ವಿಟ್ಲ ಮುಡ್ನೂರು ಗ್ರಾಮದ ಕಂಬಳಬೆಟ್ಟು ಎಂಬಲ್ಲಿ ಶನಿವಾರ ರಾತ್ರಿ ನಡೆದಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಂಬಳಬೆಟ್ಟು ನಿವಾಸಿ ಹಾಜಿ ಮುಹಿಯುದ್ದೀನ್ ಶಾಫಿ ಹಲ್ಲೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಆರೋಪಿಗಳಾದ ಕಂಬಳಬೆಟ್ಟು ಅಬ್ದುಲ್ ರಝಾಕ್ ಹಾಗೂ ಆತನ ಸಹೋದರ ಬಾತಿಷ್ ಎಂಬವರು ಶಾಫಿ ಅವರ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾರೆ. ತದನಂತರ ಶಾಫಿ ಅವರ ಪತ್ನಿಯ ಬಟ್ಟೆ ಎಳೆದು ಮಾನಹಾನಿ ಮಾಡಲು ಯತ್ನಿಸಿದ್ದಾರೆ ಎಂದು ಶಾಫಿ ವಿಟ್ಲ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.