ದಾಖಲೆ ಇಲ್ಲದೇ ಹಣ ಸಾಗಾಟ: 93 ಸಾವಿರ ರೂ. ವಶ
Update: 2018-04-08 22:33 IST
ಹಿರಿಯಡ್ಕ, ಎ. 8: ವ್ಯಕ್ತಿಯೊಬ್ಬರು ತನ್ನ ಕಾರಿನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 93,100 ರೂ.ಗಳನ್ನು ಹಿರಿಯಡ್ಕ ಸಮೀಪದ ಅಂಜಾರು ರಿಂಗ್ ರೋಡ್ ಚೆಕ್‌ಪೋಸ್ಟ್‌ನಲ್ಲಿ ಶನಿವಾರ ಮಧ್ಯರಾತ್ರಿ ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಮಲ್ಪೆಯಿಂದ ಪೆರ್ಡೂರು ಕಡೆಗೆ ಕಾರಿನಲ್ಲಿ ತೆರಳುತ್ತಿದ್ದ ಸಂತೋಷ್ ಶೇರಿಗಾರ್ ಅವರನ್ನು ತಪಾಸಣೆ ನಡೆಸಿದ ಅಧಿಕಾರಿಗಳ ತಂಡ ಕಾರಿನಲ್ಲಿ ಸೂಕ್ತ ದಾಖಲೆಗಳಿಲ್ಲದ 93,100 ರೂ.ವನ್ನು ಪತ್ತೆ ಹಚ್ಚಿದೆ. ಈ ಬಗ್ಗೆ ಅಧಿಕಾರಿಗಳು ಪ್ರಶ್ನಿಸಿದಾಗ, ನಾನು ಬಾರ್ ಆ್ಯಂಡ್ ರೆಸ್ಟೋರೆಂಟ್ ಹೊಂದಿರುವುದಾಗಿ ಅವರು ತಿಳಿಸಿದ್ದಾರೆ ಎನ್ನಲಾಗಿದೆ. ಹಣ ಇಟ್ಟುಕೊಂಡಿರುವ ಬಗ್ಗೆ ಯಾವುದೇ ಸೂಕ್ತ ದಾಖಲೆ ಇಲ್ಲದೇ ಇರುವುದರಿಂದ ಹಣವನ್ನು ಅಧಿಕಾರಿಗಳು ಸ್ವಾಧೀನಕ್ಕೆ ಪಡೆದಿದ್ದಾರೆ. ಸದ್ಯ ಸೂಕ್ತ ದಾಖಲೆ ಇಲ್ಲದೇ ಇರುವುದರಿಂದ ಹಣ ಸ್ವಾಧೀನಕ್ಕೆ ಪಡೆದಿದ್ದೇವೆ. ಸೂಕ್ತ ದಾಖಲೆ ಕೊಟ್ಟರೆ ಹಣ ಹಿಂದಿರುಗಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.