×
Ad

ಶೂಟಿಂಗ್ ನಲ್ಲಿ ಭಾರತಕ್ಕೆ ಮತ್ತೆರಡು ಪದಕ : ಮೆಹುಲಿಗೆ ಬೆಳ್ಳಿ, ಚಾಂಡೇಲಾಗೆ ಕಂಚು

Update: 2018-04-09 09:48 IST

ಗೋಲ್ಡ್ ಕೋಸ್ಟ್ ,ಎ.9: ಇಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಶೂಟಿಂಗ್ ನಲ್ಲಿ ಇನ್ನೂ ಎರಡು ಪದಕಗಳು ಸಿಕ್ಕಿದೆ.

ಮಹಿಳೆಯರ 10 ಮೀಟರ್ ಏರ್ ರೈಫಲ್ ಶೂಟಿಂಗ್ ನಲ್ಲಿ ಭಾರತದ ಮೆಹುಲಿ ಘೋಷ್ ಬೆಳ್ಳಿ ಮತ್ತು ಹಾಲಿ ಚಾಂಪಿಯನ್ ಅಪೂರ್ವಿ ಚಾಂಡೇಲಾ ಕಂಚು ಪಡೆದಿದ್ದಾರೆ.ಸಿಂಗಾಪುರದ ಮಾರ್ಟಿನಾ ಲಿಂಡ್ಸೆ ವೆಲೊಸೋ ಹೊಸ ದಾಖಲೆಯೊಂದಿಗೆ ಚಿನ್ನ ಬಾಚಿಕೊಂಡರು.

ಸಿಂಗಾಪುರದ ಮಾರ್ಟಿನಾ ಲಿಂಡ್ಸೆ ವೆಲೊಸೋ ಅವರಿಗೆ ಪಶ್ಚಿಮ ಬಂಗಾಳದ  17ರ ಹರೆಯದ ಶೂಟರ್ ಮೆಹುಲಿ ಘೋಷ್  ತೀವ್ರ ಪೈಪೋಟಿ ನೀಡಿ ಅವರಷ್ಟೇ ಅಂದರೆ 247.2 ಅಂಕಗಳಿಸಿದರೂ ,  ವೆಲೊಸೋ 10.3 ಮೀಟರ್ ಅಂತರದಲ್ಲಿ  ಗುರಿ ಛೇದಿಸಿದರೆ, ಮೆಹುಲಿ 9.9 ಮೀಟರ್ ಅಂತರದಲ್ಲಿ  ಗುರಿ  ತಲುಪಿದರು.ಇದರಿಂದಾಗಿ  ವೆಲೊಸೋ ಅವರಿಗೆ  ಚಿನ್ನ ಒಲಿಯಿತು.   ಅಪೂರ್ವಿ ಚಾಂಡೇಲಾ ಒಟ್ಟು 225.3 ಅಂಕಗಳಿಸಿ ಈ ಬಾರಿ  ಕಂಚಿನ ಪದಕಕ್ಕೇ ತೃಪ್ತಿ ಪಟ್ಟುಕೊಂಡರು. ಅವರು 4 ವರ್ಷಗಳ ಹಿಂದೆ ಗ್ಲಾಸ್ಗೋದಲ್ಲಿ ಚಿನ್ನ ಪಡೆದಿದ್ದರು.

ಅಪೂರ್ವಿ ಚಾಂಡೇಲಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News