ಕೇರಳ ಬಂದ್ ಗೆ ಕಾಸರಗೋಡು ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ

Update: 2018-04-09 07:56 GMT

ಕಾಸರಗೋಡು, ಎ.9: ದಲಿತ ದೌರ್ಜನ್ಯ ತಡೆ ಕಾಯ್ದೆ ಸರಳೀಕರಣಗೊಳಿಸುವ ತೀರ್ಪಿನ ವಿರುದ್ಧ ನಡೆಸಿದ ಭಾರತ್  ಬಂದ್  ಸಂದರ್ಭದಲ್ಲಿ  ನಡೆಸಿದ  ಗೋಲಿಬಾರ್ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ದಲಿತ ಸಂಘಟನೆಗಳು ಇಂದು ಕರೆ ನೀಡಿರುವ ಕೇರಳ ಬಂದ್  ಕಾಸರಗೋಡು ಜಿಲ್ಲೆಯಲ್ಲಿ ಭಾಗಶವಾಗಿದೆ.  

ಬಸ್ಸುಗಳು ಸಂಚಾರ ನಡೆಸುತ್ತಿದ್ದು, ಅಂಗಡಿ ಮುಂಗಟ್ಟುಗಳು  ತೆರೆದಿದ್ದು, ಸರಕಾರಿ  ಕಚೇರಿಗಳು ತೆರೆದಿವೆ. ಆದರೆ ಕಾಸರಗೋಡು ನಗರ, ಕುಂಬಳೆ, ಉಪ್ಪಳ ಮೊದಲಾದೆಡೆ ಹರತಾಳ ಪರಿಣಾಮ ಬೀರಿಲ್ಲ.

ಉದುಮ, ಪೆರಿಯ ಸೇರಿದಂತೆ ಜಿಲ್ಲೆಯ ಮಲೆನಾಡು ಪ್ರದೇಶಗಳಲ್ಲಿ ಹರತಾಳಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಬೆಳಗ್ಗೆಯಿಂದ ರಸ್ತೆಗಿಳಿದ ವಾಹನಗಳನ್ನು ಬಂದ್ ಬೆಂಬಲಿಗರು ತಡೆದರು. ಇದರಿಂದ ಬಸ್ಸು ಹಾಗೂ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಕಾಸರಗೋಡು - ಕಾಞ೦ಗಾಡ್  ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಉಳಿದಂತೆ ಬಂದ್ ಶಾಂತಿಯುತವಾಗಿದ್ದು, ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News