ಯೆನೆಪೊಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ವಿಶ್ವ ಆರೋಗ್ಯ ದಿನಾಚರಣೆ
ಕೊಣಾಜೆ, ಎ. 9: ದೇರಳಕಟ್ಟೆಯ ಯೆನೆಪೊಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವತಿಯಿಂದ ರವಿವಾರ ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಆಸ್ಪತ್ರೆಯ ಆವರಣದಲ್ಲಿ ಉಚಿತ ಮೂಳೆ ಖನಿಜ ಸಾಂದ್ರತೆ ಪರೀಕ್ಷೆ, ಭೌತಿಕ ದ್ರವ್ಯರಾಶಿ ಸೂಚಿ, ಪಥ್ಯಾಹಾರ ಆಪ್ತ ಸಮಾಲೋಚನೆ, ಮಧು ಮೇಹ ಪರೀಕ್ಷೆ ಹಾಗೂ ಹಾಗೂ ಆರೋಗ್ಯ ಶಿಕ್ಷಣ ಶಿಬಿರ ನಡೆಯಿತು.
ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ಶ್ರಿಕುಮಾರ್ ಮೆನನ್ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಯೆನೆಪೊಯ ಮೆಡಿಕಲ್ ಕಾಲೇಜಿನ ಹೆಚ್ಚುವರಿ ಪ್ರಾಂಶುಪಾಲರಾದ ಡಾ. ಮೂಸಬ್ಬ, ಕಣ್ಣೂರು ಮತ್ತು ಕಲ್ಲಿಕೋಟೆ ವಿಶ್ವವಿದ್ಯಾನಿಲಯಗಳ ಮಾಜಿ ಉಪ ಕುಲಪತಿಗಳಾದ ಪ್ರೊ. ಅಬ್ದುಲ್ ರಹಿಮಾನ್, ಯೆನೆಪೊಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಪ್ರಭಾರ ವೈದ್ಯಕೀಯ ಅಧೀಕ್ಷಕರಾದ ಡಾ.ಪಧ್ಮನಾಭ ಸಂಪತ್ತಿಲ ಹಾಗೂ ಆಸ್ಪತ್ರೆ ಆಡಳಿತ ವಿಭಾಗದ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಸುನೀತಾ ಸಲ್ದಾನ್ಹ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಾಮಾನ್ಯ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ಪ್ರಭಾ ಅಧಿಕಾರಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿ, ಎಲ್ಲರೂ ಉತ್ತಮ ಜೀವನ ಶೈಲಿಯನ್ನು ಅನುಸರಿಸಬೇಕು; ಅರೋಗ್ಯ ಸುಧಾರಣೆಗಾಗಿ ಇಂದು ಸರ್ಕಾರದ ಕಡೆಯಿಂದ ಹಲವು ಆರೋಗ್ಯ ಯೋಜನೆಗಳು ಲಭ್ಯವಿವೆ. ಇಂತಹ ಉಚಿತ ಆರೋಗ್ಯ ಯೋಜನೆಗಳ ಪ್ರಯೋಜನ ಪಡೆಯಬೇಕೆಂದು ಹೇಳಿದರು.
ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ.ಮಹಮ್ಮದ್ ಗುತ್ತಿಗಾರ್ ವಿಶ್ವ ಅರೋಗ್ಯ ದಿನದ ಧ್ಯೇಯದ ಕುರಿತು ಮಾಹಿತಿ ನೀಡಿ ಸ್ವಾಗತಿಸಿದರು. ವ ಮಾರುಕಟ್ಟೆ ವ್ಯವಹಾರ ವಿಭಾಗದ ವಿಜಯಾನಂದ ಶೆಟ್ಟಿಯವರು ವಂದನಾರ್ಪಣೆಗೈದರು. ಮಾರುಕಟ್ಟೆ ವ್ಯವಹಾರ ವಿಭಾಗ, ಸಮಾಜ ಕಾರ್ಯ ವಿಭಾಗ ಹಾಗೂ ಆಸ್ಪತ್ರೆ ಆಡಳಿತ ವಿಭಾಗಗಳು ಜಂಟಿಯಾಗಿ ಈ ಶಿಬಿರವನ್ನು ಆಯೋಜಿಸಿದ್ದರು.