ಬಂಟ್ವಾಳ: ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ
Update: 2018-04-09 18:47 IST
ಬಂಟ್ವಾಳ, ಎ. 9: ನೆಟ್ಲಮುಡ್ನೂರು ಗ್ರಾಮದ 20ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ರವಿವಾರ ರಾತ್ರಿ ಬಿಜೆಪಿಗೆ ಸೇರ್ಪಡೆಯಾದರು.
ಕಾಂಗ್ರೆಸ್ ಬೂತ್ ಸಮಿತಿಯ ಅಧ್ಯಕ್ಷ ಕುಂಞಣ್ಣ ರೈ, ರವೀಂದ್ರ ರೈ, ರೋಹಿಣಿ ರೈ, ಹರೀಶ್ ಪೂಜಾರಿ, ರೇಖಾ ಪೂಜಾರಿ ಅವರು ಬಿಜೆಪಿ ಮುಖಂಡ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅವರ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.
ಈ ಸಂಧರ್ಭದಲ್ಲಿ ಹರಿಕೃಷ್ಣ ಬಂಟ್ವಾಳ, ಬಿ.ದೇವದಾಸ ಶೆಟ್ಟಿ, ಗಣೇಶ್ ರೈ, ರಮನಾಥ ರಾಯಿ, ತನಿಯಪ್ಪ ಗೌಡ, ಹರೀಶ್ ಅಲಂಗಾಜೆ, ನಾರಾಯಣ ಶೆಟ್ಟಿ, ಸಂತೋಷ ಆಳ್ವ, ಅಶ್ವಥ್ ರೈ, ಚಂದ್ರಶೇಖರ್ ಶೆಟ್ಟಿ, ಗಿರೀಶ ಪೂಜಾರಿ, ಪುನೀತ್ ಪೂಜಾರಿ, ಶಶಿಕಲ ಭಂಡಾರಿ, ಶಕಿಲಾ ಪೂಜಾರಿ, ಜಯಶ್ರೀ, ಶಾಲಿನಿ ಪೂಜಾರಿ,ರಂಜಿತ್, ಸುರೇಶ ಕುಲಾಲ್, ಚೇತನ್ ಉಪಸ್ಥಿತರಿದ್ದರು.