ರಂಗ ನಿರ್ದೇಶಕರು ಸರ್ವಾಧಿಕಾರಿಗಳಾಗಬಾರದು: ಪ್ರಸಾದ್ ರಾವ್

Update: 2018-04-09 14:45 GMT

ಉಡುಪಿ, ಎ.9: ರಂಗ ಪ್ರದರ್ಶನದ ನಿರ್ದೇಶಕರು ಸರ್ವಾಧಿಕಾರಿಗಳಂತೆ ವರ್ತಿಸದೆ, ಪ್ರಜಾಪ್ರಭುತ್ವ ನೆಲೆಯಲ್ಲಿ ರಂಗ ಪ್ರದರ್ಶನವನ್ನು ಕಟ್ಟುವ ಕಟ್ಟಾಳುಗಳಾಗಬೇಕು. ರಂಗ ಪ್ರದರ್ಶನದ ಕೇಂದ್ರ ನಿರ್ದೇಶಕ ಪ್ರದರ್ಶನವನ್ನು ನಿಯಂತ್ರಿಸುವವನೂ ಕೂಡಾ. ಆದರೆ ನಿಯಂತ್ರಣ ಏಕ ಮುಖವಾಗಿರದೆ ಕೇಂದ್ರದ ಪರಿಧಿಯೊಂದಿಗೆ ಕೊಡು-ಕೊಳ್ಳುವಿಕೆಯ ಮನೋಭಾವವಿದ್ದರೆ ರಂಗ ಪ್ರದರ್ಶನದಲ್ಲಿ ಒಂದು ಸೃಜನಶೀಲತೆಯ ಅನಾವರಣವಾಗುತ್ತದೆ ಎಂದು ತೆಂಕನಿಡಿಯೂರು ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಆಂಗ್ಲ ಭಾಷಾ ಮುಖ್ಯಸ್ಥ ಮತ್ತು ರಂಗಕರ್ಮಿಗಳಾದ ಪ್ರೊ.ಎಂ.ಪ್ರಸಾದ್ ರಾವ್ ಅಭಿಪ್ರಾಯ ಪಟ್ಟಿದ್ದಾರೆ.

ರಥಬೀದಿ ಗೆಳೆಯರು ಉಡುಪಿ ಮತ್ತು ಸಂಗಮ ಕಲಾವಿದೆರ್ ಮಣಿಪಾಲ ಜಂಟಿಯಾಗಿ ಆಯೋಜಿಸಿದ ‘ಬಣ್ಣದ ಹೆಜ್ಜೆ’ ರಂಗ ತರಬೇತಿಯ ನಿರ್ದೇಶಕರು ಗಳ ಕಾರ್ಯಾಗಾರ ‘ಸೃಜನ ಕೌಶಲ’ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ರಥಬೀದಿ ಗೆಳೆಯರು ಉಡುಪಿ ಮತ್ತು ಸಂಗಮ ಕಲಾವಿದೆರ್ ಮಣಿಪಾಲ ಜಂಟಿಯಾಗಿ ಆಯೋಜಿಸಿದ ‘ಬಣ್ಣದ ಹೆಜ್ಜೆ’ ರಂಗ ತರಬೇತಿಯ ನಿರ್ದೇಶಕರು ಗಳ ಕಾರ್ಯಾಗಾರ ‘ಸೃಜನ ಕೌಶಲ’ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ರಂಗ ನಿರ್ದೇಶಕ ತಾನೇ ಎಂಬ ಅಹಂನಿಂದ ತನ್ನ ಅಭಿಪ್ರಾಯಗಳನ್ನು ನಟರ ಮೇಲೆ ಹೇರಿದರೆ ಅದೊಂದು ಯಾಂತ್ರಿಕ ರಂಗ ಪ್ರಯೋಗವಾಗುತ್ತದೆ. ಇಂತಹ ಪ್ರಯೋಗಗಳಿಂದ ಸಮಾಜವೇನು ನಿರೀಕ್ಷಿಸುವಂತಿಲ್ಲ.ನಿರ್ದೇಶಕ ತನ್ನ ಜವಾಬ್ದಾರಿಯನ್ನು ಎಲ್ಲರಿಗೂ ಹಂಚಿ ತನ್ನ ಜವಾಬ್ದಾರಿಯನ್ನು ಹೆಚ್ಚಿಸಿ ಕೊಳ್ಳಬೇಕು. ಆತ ಮಾತ್ರ ರಂಗಭೂಮಿಯಲ್ಲಿ ಒಬ್ಬ ಯಶಸ್ವಿ ನಿರ್ದೇಶಕನಾಗ ಬಲ್ಲ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ರಥಬೀದಿ ಗೆಳೆಯರು ಸಂಘಟನೆ ಅಧ್ಯಕ್ಷ ಪ್ರೊ. ಮುರುಳೀಧರ ಉಪಾಧ್ಯ ಹಿರಿಯಡ್ಕ ವಹಿಸಿ ಕಾರ್ಯಾಗಾರಕ್ಕೆ ಶುಭ ಹಾರೈಸಿದರು.

ಶಿಬಿರದ ನಿರ್ದೇಶಕ ಡಾ. ಶ್ರೀಪಾದ್ ಭಟ್ ಕಾರ್ಯಾಗಾರದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಬಣ್ಣದ ಹೆಜ್ಜೆ ಮಕ್ಕಳ ರಂಗ ತರಬೇತಿ ಶಿಬಿರದ ಸಂಚಾಲಕ ರಾಜು ಮಣಿಪಾಲ ಉಪಸ್ಥಿತರಿದ್ದರು. ಇನ್ನೊಬ್ಬ ಸಂಚಾಲಕ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿ, ಸಂಗಮ ಕಲಾವಿದೆರ್ ಮಣಿಪಾಲ ಅಧ್ಯಕ್ಷ ಲಕ್ಷ್ಮಣ ಪೆರಂಪಳ್ಳಿ ವಂದಿಸಿದರು.

ರಥಬೀದಿ ಗೆಳೆಯರು ಸಂಘಟನೆಯ ನಾಟಕ ವಿಭಾಗದ ಸಂಚಾಲಕ ಸಂತೋಷ್ ಶೆಟ್ಟಿ ಹಿರಿಯಡ್ಕ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News