ಕಾಪು: ರಾಜ್ಯಮಟ್ಟದ ಕರಾಟೆ ಸ್ಪರ್ಧೆ ಉದ್ಘಾಟನೆ
ಕಾಪು, ಎ.9: ಜಪಾನ್‌ನ ಶೋಟೊಕಾನ್ ಕರಾಟೆ ಡು ಕನ್ನಿಂಜುಕು ಅಸೋಸಿಯೇಷನ್ ಆಫ್ ಕರ್ನಾಟಕ ಇದರ ವತಿಯಿಂದ ರಾಜ್ಯಮಟ್ಟದ ಇಂಟರ್ ಡೋಜೊ ಕರಾಟೆ ಸ್ಪರ್ಧೆಯು ಇತ್ತೀಚೆಗೆ ಕಾಪುವಿನ ಕಾಂಚನ್ ಸಮುದಾಯ ಭವನದಲ್ಲಿ ಜರಗಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿಯ ಉದ್ಯಮಿ ಮನೋಹರ್ ಶೆಟ್ಟಿ ಇವರು ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ಯುವತಿಯರು ಸ್ವರಕ್ಷಣೆಗಾಗಿ ಕರಾಟೆ ಶಿಕ್ಷಣವನ್ನು ಪಡೆಯುವಂತೆ ಅವರು ಸಲಹೆ ನೀಡಿದರು.
ಕಾಂಚನ್ ನಾಗಮೂಲಸ್ಥಾನ ಪೊಲಿಪು ಕಾಪು ಇದರ ಕಾರ್ಯದರ್ಶಿ ಶ್ರೀಧರ್ ಕಾಂಚನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಉಡುಪಿಯ ವೈದ್ಯ ಡಾ.ಗಣೇಶ ಕಾಮತ್, ಉಚ್ಚಿಲ ಮಹಾಲಕ್ಷಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿಸಿ ಶಾಂತ ಶೆಟ್ಟಿಗಾರ್, ಕಾಪು ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲರಾದ ವಿದ್ಯಾಧರ ಪುರಾಣಿಕ್, ಹೊಸದಿಲ್ಲಿಯ ಮೊದಿನ್ ಬ್ಯಾರಿ ಭಾಗವಹಿಸಿದ್ದರು. ಕರಾಟೆ ಪರೀಕ್ಷಕ ಹಾಗೂ ಮುಖ್ಯ ಶಿಕ್ಷಕ ಶಂಶುದ್ದೀನ್ ಎಚ್.ಶೇಕ್ ಸ್ಪರ್ಧಾಕೂಟವನ್ನು ಆಯೋಜಿಸಿದ್ದರು.