ಗೃಹರಕ್ಷಕರ ನೇಮಕಾತಿ ಹಿನ್ನೆಲೆ: ಚುನಾವಣಾ ಪೂರ್ವ ಸಿದ್ಧತಾ ಸಭೆ
Update: 2018-04-09 22:19 IST
ಮಂಗಳೂರು, ಎ.9: ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಗೃಹರಕ್ಷಕರ ನೇಮಕಾತಿ ಮತ್ತು ಬಳಕೆ ವಿಚಾರದ ಬಗ್ಗೆ ಬೆಂಗಳೂರಿನಲ್ಲಿರುವ ಗೃಹರಕ್ಷಕರ ಕೇಂದ್ರ ಕಚೇರಿಯಲ್ಲಿ ಚುನಾವಣಾ ಪೂರ್ವ ಸಿದ್ಧತಾ ಸಭೆ ನಡೆಯಿತು. ರಾಜ್ಯದ 33 ಗೃಹರಕ್ಷಕರ ಸಮಾದೇಷ್ಟರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಗೃಹರಕ್ಷಕ ದಳ ಪೊಲೀಸ್ ಮಹಾನಿರೀಕ್ಷಕಿ ರೂಪಾ ಚುನಾವಣಾ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ತರಬೇತಿ ಹೊಂದಿದ ಗೃಹರಕ್ಷಕರನ್ನು ಕರ್ತವ್ಯಕ್ಕೆ ನೇಮಿಸಲು ಸೂಚಿಸಿದರು.
ದ.ಕ.ಜಿಲ್ಲಾ ಸಮಾದೇಷ್ಟ ಡಾ. ಮುರಲೀ ಮೋಹನ್ ಚೂಂತಾರು ಮಾತನಾಡಿ ಜಿಲ್ಲೆಯಲ್ಲಿ 800 ಗೃಹರಕ್ಷಕರು ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.