×
Ad

ಮಂಗಳೂರು: ಮೊರಾರ್ಜಿ ಶಾಲೆಗಳ ಪ್ರವೇಶ ಪರೀಕ್ಷಾ ಕೇಂದ್ರಗಳು

Update: 2018-04-09 22:21 IST

ಮಂಗಳೂರು, ಎ.9: ದ.ಕ.ಜಿಲ್ಲೆಯ ಮಂಗಳೂರು ತಾಲೂಕಿನ ಕಲ್ಲಬೆಟ್ಟು, ನೀರುಮಾರ್ಗ, ಕಮ್ಮಾಜೆ, ಗುರುಪುರ ಹಾಗೂ ಬೆಳ್ತಂಗಡಿ ತಾಲೂಕಿನ ಮಚ್ಚಿನ, ಮುಂಡಾಜೆ, ಹೊಸಂಗಡಿ ಮತ್ತು ಬಂಟ್ವಾಳ ತಾಲೂಕಿನ ವಗ್ಗ, ಪುತ್ತೂರು ತಾಲೂಕಿನ ಬಳ್ನಾಡು, ಉಪ್ಪಿನಂಗಡಿ ಹಾಗೂ ಸುಳ್ಯ ತಾಲೂಕಿನ ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಪ್ರವೇಶ ಪರೀಕ್ಷೆಯು ಆಯಾ ತಾಲೂಕು ಕೇಂದ್ರಗಳಲ್ಲಿ ಎ.15ರಂದು ಪೂರ್ವಾಹ್ನ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರಗೆ ಮಂಗಳೂರಿನ ಮಿಲಾಗ್ರಿಸ್ ಕಾಲೇಜು, ಹಾಗೂ ಶ್ರೀರಾಮಕೃಷ್ಣ ಶಾಲೆ ಬಂಟ್ಸ್ ಹಾಸ್ಟೆಲ್, ಬಂಟ್ವಾಳದ ನೇತಾಜಿ ಸುಭಾಸ್‌ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆ ಕೊಡಂಜೆ, ಬೆಳ್ತಂಗಡಿಯ ಸಂತ ತರೇಸಾ ಪ್ರೌಢಶಾಲೆ ಹಾಗೂ ಚರ್ಚ್ ಅನುದಾನಿತ ಹಿ.ಪ್ರಾ.ಶಾಲೆ, ಪುತ್ತೂರಿನ ಡಾ. ಶಿವರಾಮ ಕಾರಂತ ಸರಕಾರಿ ಪ್ರೌಢಶಾಲೆ, ಸುಳ್ಯದ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪರೀಕ್ಷೆ ನಡೆಯಲಿದೆ.

ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಸಂಬಂಧಿಸಿದ ವಸತಿ ಶಾಲೆಗಳಿಂದ ಪ್ರವೇಶ ಪತ್ರಗಳನ್ನು ಪಡೆದು ಪ್ರವೇಶ ಪರೀಕ್ಷೆಗೆ ಹಾಜರಾಗಬೇಕು. ಮಾಹಿತಿಗೆ ಮೊ.ಸಂ: 9071881974/ 0824-2451237 ಸಂಪರ್ಕಿಸಲು ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಹಾಗೂ ಸದಸ್ಯ ಕಾರ್ಯದರ್ಶಿ ಜಿಲ್ಲಾ ಮಟ್ಟದ ಪ್ರವೇಶ ಪರೀಕ್ಷಾ ಸಮಿತಿ, ದ.ಕ ಮಂಗಳೂರು ಇವರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News